ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 28–2–1969

50 ವರ್ಷಗಳ ಹಿಂದೆ
Last Updated 27 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ನಲವತ್ತಾರಕ್ಕೆ ಬಂದ ನಮ್ಮ ಮುಖ್ಯಮಂತ್ರಿ

ನಮ್ಮ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರಿಗೆ ಇಂದಿಗೆ ನಲವತ್ತೈದು ಮುಗಿದು ನಲವತ್ತಾರು ವರ್ಷ. ಹುಟ್ಟುಹಬ್ಬದ ಮುನ್ನಾದಿನ ಅವರು ಅಂತರ್ಮುಖಿ.

ಕನ್ನಡ ಜನಪದದ ಸುಖ ಸಂತೋಷಕ್ಕಾಗಿ ದುಡಿವ ದೀಕ್ಷೆ. ಹಿರಿಯರು, ಚಾಣಾಕ್ಷರು, ಮೇಧಾವಿಗಳು ಇದ್ದರೂ ತಮಗೆ ಸಂದ ಅವಕಾಶ ಸಾರ್ಥಕಗೊಳಿಸಬೇಕೆಂಬ ಸಂಕಲ್ಪ.

ಒಂಬತ್ತು ತಿಂಗಳು ಮುಖ್ಯಮಂತ್ರಿ ಪದಕ್ಕೆ ಅಲ್ಪಸಮಯ. ಕಳಕಳಿಯ ಪ್ರಯತ್ನಕ್ಕೆ ನಾಂದಿ. ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಗಿರುವ ಈಗ ಶುದ್ಧ ಆಡಳಿತ ತೊಟ್ಟ ಪಣ. ಅದಕ್ಕೆ ಯಕ್ಷಿಣೀದಂಡ ಯಾವುದೂ ಇಲ್ಲ ಎಂಬ ಅರಿವು.

ಅಪೊಲೊ–9 ಯಾನ ಸೋಮವಾರಕ್ಕೆ

ಕೇಪ್‌ ಕೆನಡಿ, ಫೆ. 27– ಇಂದು ಪ್ರಾರಂಭವಾಗಬೇಕಾಗಿದ್ದ ಅಪೊಲೊ –9 ಬಾಹ್ಯಾಕಾಶ ನೌಕೆ ಯಾನವನ್ನು ಮೂವರು ಗಗನ
ಗಾಮಿಗಳಿಗೂ ನೆಗಡಿಯಾಗಿರುವುದರಿಂದ ಸೋಮವಾರಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT