ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪಟಾಕಿ ಅಪಾಯ ಗಣನೆಗೆ ಬರಲಿ

Last Updated 21 ಅಕ್ಟೋಬರ್ 2022, 22:45 IST
ಅಕ್ಷರ ಗಾತ್ರ

ದೀಪಾವಳಿ ಮತ್ತೆ ಮನೆ ಬಾಗಿಲಿಗೆ ಬಂದಿದೆ. ಬಹುಪಾಲು ಮಂದಿ ಪಟಾಕಿ ಸಿಡಿಸುತ್ತಾರೆ. ಪಟಾಕಿಗಳನ್ನು ಸುಡುವುದರಿಂದ ಆಗುವ ಮಾಲಿನ್ಯ, ಹಾನಿಕಾರಕ ವಿಷ ಪದಾರ್ಥಗಳ ಬಿಡುಗಡೆಯಿಂದ ವಾತಾವರಣಕ್ಕೆ, ಓಜೋನ್‌ ಪದರಕ್ಕೆ ಆಗುವ ಹಾನಿಯ ಬಗ್ಗೆ ತಿಳಿದಿರುವವರು ಇವರಲ್ಲಿ ಎಷ್ಟು ಮಂದಿ ಇದ್ದಾರೆ? ಪಟಾಕಿಗಳನ್ನು ತಯಾರಿಸುವಾಗ ಮತ್ತು ಸುಡುವಾಗ ಸಂಭವಿಸುವ ಅವಘಡಗಳನ್ನು ಗಣನೆಗೆ ತೆಗೆದುಕೊಳ್ಳುವವರು ಯಾರು?

ಅವಘಡ ಸಂಭವಿಸಿದರೆ, ಅದರಿಂದಾಗಿ ಆಸ್ಪತ್ರೆಗೆ ಅಲೆದಾಡುವಂಥ ಕಷ್ಟ ಗೊತ್ತೇ ಇದೆ. ಮನೆಗಳಲ್ಲಿ ವೃದ್ಧರು, ರೋಗಿಗಳು ಇರುತ್ತಾರೆ. ಅವರಿಗೆ ಪಟಾಕಿ ಶಬ್ದ ಅಸಹನೀಯ ಆಗಬಹುದು, ಪ್ರಾಣಿಗಳಿಗೂ ಕಿರಿಕಿರಿ. ಇಂತಹ ಪಟಾಕಿ ಸುಡುವುದನ್ನು ಮೊದಲು ತ್ಯಜಿಸೋಣ. ಮನೆಯ ಸುತ್ತಲೂ ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಆನಂದದಿಂದ ಆಸ್ವಾದಿಸೋಣ. ಪಟಾಕಿಗಳಿಗೆ ಖರ್ಚು ಮಾಡುವ ಹಣವನ್ನು ದಾನ ಧರ್ಮಕ್ಕೆ ವಿನಿಯೋಗಿಸಬಹುದು. ಮಕ್ಕಳಿಗೆ ಉಪಯುಕ್ತವಾದ ವಸ್ತುಗಳನ್ನು ಕೊಡಿಸಲು ಬಳಸಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ ಪರಿಸರ ಸಂರಕ್ಷಿಸೋಣ.

ಕೃಷ್ಣಚೈತನ್ಯ ಡಿ., ಗೋಣಿಕೊಪ್ಪಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT