ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ತಾರತಮ್ಯ ಕ್ರಮದಿಂದ ಆರ್ಥಿಕ ಅಸಮಾನತೆ

Last Updated 8 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ಪ್ರಧಾನಮಂತ್ರಿಯವರು ಹೂಡಿಕೆದಾರರನ್ನು ವೆಲ್ತ್‌ ಕ್ರಿಯೇಟರ್ಸ್ ಎಂದು ಕರೆದಿದ್ದಾರೆ. ಆದರೆ, ಅವರ ಪಾತ್ರ ಸಂಪತ್ತಿನ ಸೃಷ್ಟಿಗೆ ಮಾತ್ರ ಸೀಮಿತವಾಗಿದೆಯೇ? ವಾಣಿಜ್ಯ ಬ್ಯಾಂಕುಗಳು ಎಂಟು ವರ್ಷಗಳಲ್ಲಿ (2013ರಿಂದ 2021) ಬೆರಳೆಣಿಕೆಯಷ್ಟು ಉದ್ದಿಮೆದಾರರ ಒಟ್ಟು ₹ 10.8 ಲಕ್ಷ ಕೋಟಿ ಸಾಲವನ್ನು ತಮ್ಮ ಅಡಾವೆ ಪತ್ರದಿಂದ ರೈಟ್‌ಆಫ್‌ ಮಾಡಿವೆ. ಕಳೆದ ದಶಕದಲ್ಲಿ ಬ್ಯಾಂಕುಗಳು ರೈಟ್‌ಆಫ್‌ ಮಾಡಿದ ಕೃಷಿ ಸಾಲ ₹ 4.7 ಲಕ್ಷ ಕೋಟಿ.

ಬಡವರಿಗೆ ಉಚಿತವಾಗಿ ಸವಲತ್ತುಗಳನ್ನು ನೀಡುವ ಕ್ರಮವನ್ನು ನಮ್ಮ ಪ್ರಧಾನಿ ‘ಪುಕ್ಕಟೆ ಕಾಣಿಕೆ’ (ಫ್ರೀಬೀಸ್) ಎಂದು ಅಣಕವಾಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಜಮಾಖರ್ಚು ಖಾತೆಯಿಂದ ಹೂಡಿಕೆದಾರರ ₹ 10.8 ಲಕ್ಷ ಕೋಟಿ ಸಾಲವನ್ನು ವಾಣಿಜ್ಯ ಬ್ಯಾಂಕುಗಳು ರೈಟ್‌ಆಫ್‌ ಮಾಡಿರುವುದನ್ನು ಏನೆಂದು ಕರೆಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಬಡವರು, ರೈತರು, ಕಾರ್ಮಿಕರು ಮುಂತಾದ ದುರ್ಬಲ ವರ್ಗಗಳಿಗೆ ನೀಡುವ ಸೌಲಭ್ಯಗಳನ್ನು ‘ಅನುತ್ಪಾದಕ’ ಎಂದೂ ಕೈಗಾರಿಕೋದ್ಯಮಿಗಳಿಗೆ ನೀಡುವ ಸೌಲಭ್ಯಗಳನ್ನು ‘ಉತ್ಪಾದಕ’ ಎಂದೂ ಪರಿಗಣಿಸುವ ಕ್ರಮ ಪ್ರಚಲಿತದಲ್ಲಿದೆ. ಹಾಗಾದರೆ ಬ್ಯಾಂಕುಗಳು ರೈಟ್‌ಆಫ್‌ ಮಾಡಿರುವ ಮೊತ್ತ ಉತ್ಪಾದಕವೇ? ಸಾಲ ನೀಡಿಕೆಯಲ್ಲಿ ಬಡವರು- ಶ್ರೀಮಂತರು ಎಂದು ತಾರತಮ್ಯ ಮಾಡುವ ಮತ್ತು ರೈಟ್‌ಆಫ್‌ ಕ್ರಮವು
ಆರ್ಥಿಕತೆಯಲ್ಲಿ ಅಸಮಾನತೆಯನ್ನು ಹೆಚ್ಚಿಸುತ್ತವೆ.

ಟಿ.ಆರ್.ಚಂದ್ರಶೇಖರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT