ಶನಿವಾರ, ಸೆಪ್ಟೆಂಬರ್ 24, 2022
21 °C

ವಾಚಕರವಾಣಿ: ನಕಲಿ ದಾಖಲೆಗಳ ಬಗ್ಗೆ ಎಚ್ಚರ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದೇ ನಿವೇಶನಕ್ಕೆ ಮೂರು ಬ್ಯಾಂಕ್‌ಗಳಿಂದ ಸಾಲ ಪಡೆದು ವಂಚಿಸಿರುವುದು ಮೈಸೂರು ನಗರದಿಂದ ವರದಿಯಾಗಿದೆ. ಸಾಮಾನ್ಯವಾಗಿ ಬ್ಯಾಂಕ್‌ಗಳು ಸಾಲ ನೀಡುವಾಗ ಮೂಲ ದಾಖಲೆ ಹಾಗೂ ಉಪನೋಂದಣಾಧಿಕಾರಿ ಕಚೇರಿಯ ಋಣಭಾರ ಪತ್ರ ಪಡೆದು ಸಾಲ ನೀಡುತ್ತವೆ. ಇದು ವಾಸ್ತವಾಂಶ. ಹಾಗಿದ್ದರೂ ಇವುಗಳನ್ನು ಪರಿಶೀಲಿಸದೇ ಹೇಗೆ ಬ್ಯಾಂಕ್‌ಗಳು ಮತ್ತೆ ಮತ್ತೆ ಸಾಲ ಮಂಜೂರು ಮಾಡಿದವು? ಇಲ್ಲಿ ಯಾವ ರೀತಿ ವಂಚಿಸಲಾಗಿದೆ ಎನ್ನುವುದನ್ನು ಬ್ಯಾಂಕ್‌ಗಳು ಬಹಿರಂಗಪಡಿಸಬೇಕು.

ನಿವೇಶನದ ಅಥವಾ ಮನೆಯ ಮೂಲ ದಾಖಲೆಗಳು ಕಳೆದಿವೆ, ಸಿಕ್ಕಿದವರು ತಲುಪಿಸಿ ಎನ್ನುವ ಜಾಹೀರಾತುಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ.  ಅಷ್ಟು ಸುಲಭವಾಗಿ ಯಾರೂ ಮೂಲ ದಾಖಲೆಗಳನ್ನು ಕಳೆದುಕೊಳ್ಳುವುದಿಲ್ಲ. ಆದರೂ ಕಳೆದಿವೆ ಎನ್ನುವ ಜಾಹೀರಾತಿನಲ್ಲಿ ಇಂತಹ ವ್ಯವಹಾರದ ಸಂಶಯ ಮೂಡದಿರದು. ಇವುಗಳ ಬಗ್ಗೆಯೂ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರಗಳು ಎಚ್ಚರ ವಹಿಸಬೇಕು.

ಮುಳ್ಳೂರು ಪ್ರಕಾಶ್, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.