ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವು ಖಾಸಗಿ ವಿಶ್ವವಿದ್ಯಾಲಯಗಳ ಅವಾಂತರ

Last Updated 6 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

‘ಕಾಂಚಾಣದ ಕರಾಮತ್ತು: ಮಂಡ್ಯ ಜಿಲ್ಲೆಗೆ 350 ಗೌರವ ಡಾಕ್ಟರೇಟ್’ ಎಂಬ ವರದಿ ಓದಿದರೆ (ಪ್ರ.ವಾ., ಆ.2) ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಸಂಘ–ಸಂಸ್ಥೆಗಳು ದೇಶದಲ್ಲಿ ಎಂತಹ ಅವಾಂತರಗಳನ್ನು ಸೃಷ್ಟಿಸುತ್ತಿವೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ವಿಶ್ವವಿದ್ಯಾಲಯಗಳು ಎಸಗುತ್ತಿರುವ ಅಕ್ರಮಗಳು ಒಂದೆರಡಲ್ಲ. ಹಣ ಪಡೆದು ಬೇಕಾಬಿಟ್ಟಿಯಾಗಿ ಸ್ನಾತಕೋತ್ತರ ಪದವಿಗಳನ್ನು ನೀಡುತ್ತವೆ. ಆರು ತಿಂಗಳ ಅವಧಿಯಲ್ಲೇ ಎಂ.ಫಿಲ್ ಪದವಿಯನ್ನು ನೀಡುತ್ತವೆ.

ಅಂಕ ನೀಡಿಕೆಯಲ್ಲೂ ಎಲ್ಲಿಲ್ಲದ ಧಾರಾಳತನ.ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕೆ ಅಷ್ಟೇ ಮುಕ್ತ ಅವಕಾಶ. ಈ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದವರು, ಹೆಚ್ಚು ಅಂಕಗಳ ಕಾರಣದಿಂದಲೇ ಸರ್ಕಾರಿ ಹುದ್ದೆಗಳಿಗೆ ಸುಲಭವಾಗಿ ಆಯ್ಕೆಯಾಗುತ್ತಾರೆ. ಇಂತಹ ಅನೇಕ ಅಭ್ಯರ್ಥಿಗಳು ಪದವಿಪೂರ್ವ ಕಾಲೇಜುಗಳಲ್ಲಿ, ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲೇ ಕುಸಿದಿರುವ ನಮ್ಮ ಶಿಕ್ಷಣದ ಗುಣಮಟ್ಟವನ್ನು ಇಂತಹ ವಿಶ್ವವಿದ್ಯಾಲಯಗಳು ಇನ್ನಷ್ಟು ಕುಸಿಯುವಂತೆ ಮಾಡುತ್ತವೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಈ ಬಗೆಯ ವಿಶ್ವವಿದ್ಯಾಲಯಗಳಿಗೆ ನಿಯಂತ್ರಣ ಹೇರಬೇಕು.

– ಮುರಲೀಧರ ಕುಲಕರ್ಣಿ, ಬೀದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT