ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಡರಸರ ಜಾಗದಲ್ಲಿ...

Last Updated 28 ಸೆಪ್ಟೆಂಬರ್ 2020, 15:43 IST
ಅಕ್ಷರ ಗಾತ್ರ

ಶಾಸಕರ ವಿಐಪಿ ಸಂಸ್ಕೃತಿ ಕುರಿತ ಸಂಪಾದಕೀಯ (ಪ್ರ.ವಾ., ಸೆ. 26) ಸಕಾಲಿಕ. ಹಿಂದೆ ಶಿವರಾಮ ಕಾರಂತರು ಬರೆದಿದ್ದ ಈ ವಾಕ್ಯ ಗಮನಾರ್ಹ: ‘ಬ್ರಿಟಿಷರು ಇಲ್ಲಿಂದ ಹೋಗುವಾಗ ಇಲ್ಲಿ ಸುಮಾರು ಐನೂರು ಮಂದಿ ತುಂಡರಸರು ಆಳುತ್ತಿದ್ದರು. ಆ ತುಂಡರಸರ ಜಾಗದಲ್ಲಿ ಅವರ ಹತ್ತು ಪಟ್ಟು ಸಂಖ್ಯೆಯಲ್ಲಿ ಜನಪ್ರತಿನಿಧಿಗಳನ್ನು ಆರಿಸಿ ಅವರಿಗೆ ತುಂಡರಸರ ಪಟ್ಟವನ್ನು ಕಟ್ಟಿದೆವು’. ಇದೇ ಅರ್ಥ ಬರುವ ಮಾತುಗಳನ್ನು ದಿವಂಗತರಾದ ಬೀಚಿ ಮತ್ತು ಸಂತೋಷಕುಮಾರ ಗುಲ್ವಾಡಿ ಸಹ ಬರೆದಿದ್ದಾರೆ.

ಭಾರತೀಯರ ಡೌಲು, ದರ್ಪಕ್ಕೆ ಮೂಲ ಕಾರಣ ಜನಸಾಮಾನ್ಯರ ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ಊಳಿಗಮಾನ್ಯ ಮನಃಸ್ಥಿತಿ. ಹೆಚ್ಚಿನ ಭಾರತೀಯರಿಗೆ ಗೊತ್ತಿರುವುದು ಅಧಿಕಾರ ಬಂದಾಗ ದರ್ಪ, ಇಲ್ಲದಿದ್ದರೆ ದೈನ್ಯ.

ಪ್ರೊ. ಶಶಿಧರ ಪಾಟೀಲ್‌, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT