ಮಂಗಳವಾರ, ಡಿಸೆಂಬರ್ 10, 2019
17 °C

ಕಾಗದದ ವ್ಯರ್ಥ ಬಳಕೆ ಸರಿಯಲ್ಲ

Published:
Updated:

ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತರಿಸಲು ವಿದ್ಯಾರ್ಥಿಗಳಿಗೆ 42 ಪುಟಗಳ ಬುಕ್‌ಲೆಟ್ ಕೊಡುವ ಪಿಯು ಮಂಡಳಿಯ ನಿರ್ಧಾರ ದುರದೃಷ್ಟಕರ ಮತ್ತು ವಿವೇಚನಾರಹಿತವಾದುದು. ಎಲ್ಲೋ ಶೇ 10ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿಗೆ ಗಣಿತದಂತಹ ಒಂದೆರಡು ವಿಷಯಗಳಿಗೆ 20ಕ್ಕಿಂತ ಹೆಚ್ಚು ಪುಟಗಳು ಬೇಕಾಗಬಹುದು. ಅದಕ್ಕಾಗಿ ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಿಗೂ ಹೆಚ್ಚಿನ ಪೇಪರ್ ಕೊಡುವುದು ಅನುಚಿತ ಮಾತ್ರವಲ್ಲ ಕಾಗದದ ವ್ಯರ್ಥ ಬಳಕೆಯೇ ಸರಿ.

ಆರೇಳು ಲಕ್ಷ ವಿದ್ಯಾರ್ಥಿಗಳಿಗೆ ಆರು ವಿಷಯಗಳಿಗೆ ವ್ಯರ್ಥವಾಗುವ ಕಾಗದದ ಪ್ರಮಾಣವೆಷ್ಟು ಎಂಬುದನ್ನು ಊಹಿಸಿದರೆ ಅಗಾಧತೆಯ ಅರಿವಾಗುತ್ತದೆ. ಹೆಚ್ಚುವರಿ ಹಾಳೆಗಳನ್ನು ಕಿತ್ತುಹೋಗದಂತೆ ಕೊನೆಯ ಶೀಟಿನ ಒಳಗೆ ಕಟ್ಟುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಕಾಗದರಹಿತ ಕಚೇರಿಗಳ ಮೂಲಕ ಪರಿಸರದ ಮೇಲಿನ ಒತ್ತಡ ತಗ್ಗಿಸುವ ಯೋಚನೆಯನ್ನೇ ಅಪಹಾಸ್ಯ ಮಾಡುವಂತಿದೆ ಈ ತೀರ್ಮಾನ. ಹೆಚ್ಚುವರಿ ಹಾಳೆಗಳನ್ನು ಪಡೆಯಲು ಸಮಯ ವ್ಯರ್ಥವಾಗುತ್ತದೆ ಎಂಬುದು ವ್ಯರ್ಥ ಸಬೂಬು. ಇಲಾಖೆ ತನ್ನ ತೀರ್ಮಾನವನ್ನು ಮರುಪರಿಶೀಲಿಸಲಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು