ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ | ಆರೋಗ್ಯ ಇಲಾಖೆ ಗಮನಹರಿಸೀತೆ?

ಅಕ್ಷರ ಗಾತ್ರ

ಲೈಂಗಿಕ ಕಾರ್ಯಕರ್ತೆಯರು, ತೃತೀಯ ಲಿಂಗಿಗಳು ಮತ್ತು ಪುರುಷ ಸಲಿಂಗಕಾಮಿಗಳು ಸದ್ಯಕ್ಕೆ ದಂಧೆಯಲ್ಲಿ ತೊಡಗದಂತೆ ಪ್ರತೀ ಜಿಲ್ಲೆಯ ಕರ್ನಾಟಕ ಏಡ್ಸ್ ನಿಯಂತ್ರಣ ಘಟಕದ ಮೂಲಕ ಎಚ್ಚರಿಕೆ ಹಾಗೂ ಸೂಕ್ತ ತಿಳಿವಳಿಕೆಯನ್ನು ಆರೋಗ್ಯ ಇಲಾಖೆ ತುರ್ತಾಗಿ ನೀಡಬೇಕಾಗಿದೆ. ತೃತೀಯ ಲಿಂಗಿಗಳ ತಕ್ಷಣದ ಜೀವನೋಪಾಯಕ್ಕೆಂದು ಸರ್ಕಾರದ ವತಿಯಿಂದ ಎರಡು ತಿಂಗಳ ದವಸ ಧಾನ್ಯವನ್ನೂ ಪಿಂಚಣಿಯನ್ನೂ ನೀಡಬೇಕೆಂದು ಹೈಕೋರ್ಟ್ ಆದೇಶಿಸಿರುವುದರಿಂದ, ಬಹಳಷ್ಟು ಜಿಲ್ಲೆಗಳಲ್ಲಿ ಈ ಆದೇಶ ಜಾರಿಯಾಗುತ್ತಿದೆ. ಇದೇ ಸಂದರ್ಭದಲ್ಲಿ ಬಡತನ, ಕಳ್ಳಸಾಗಣೆ, ಬಾಲ್ಯವಿವಾಹದಂತಹ ಕಾರಣಕ್ಕಾಗಿ ದಂಧೆಗೆ ಬಿದ್ದು, ಆರೋಗ್ಯ ಇಲಾಖೆಯ ಕಾಂಡೋಂ ಹಂಚಿಕೆಯ ಜಾಲದಡಿ ರಾಜ್ಯದಾದ್ಯಂತ ನೋಂದಣಿಯಾಗಿರುವ ಲೈಂಗಿಕ ದಮನಿತ ಹೆಣ್ಣುಮಕ್ಕಳು ಈ ಸಂದರ್ಭದಲ್ಲಿ ಜೀವನ ನಿರ್ವಹಣೆಗೆ ಅತ್ಯಂತ ಕಷ್ಟಪಡುತ್ತಿದ್ದಾರೆ. ಇವರಿಗೂ ತಕ್ಷಣವೇ ಪಡಿತರ, ಸಹಾಯಧನ ನೀಡಬೇಕು.

ಮೂರು ವರ್ಷಗಳ ಹಿಂದೆ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ‘ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ’ ಸಮಿತಿಯ ವರದಿಯಲ್ಲಿ ದಾಖಲಾಗಿರುವಂತೆ, ಆರೋಗ್ಯ ಇಲಾಖೆಯಡಿ ನೋಂದಣಿಯಾಗಿರುವ ಲೈಂಗಿಕ ದಮನಿತರಲ್ಲಿ ಶೇ 72ರಷ್ಟು ಮಂದಿ ಪುನರ್ವಸತಿಗಾಗಿ ಅತ್ಯಂತ ದಯನೀಯವಾಗಿ ಬೇಡಿಕೊಂಡಿದ್ದಾರೆ. ಆದರೆ ಇದುವರೆಗಿನ ಸರ್ಕಾರಗಳು ಇವರ ಬೇಡಿಕೆಯನ್ನು ಪರಿಗಣಿಸದೇ ಇರುವುದರಿಂದ ಇವರೆಲ್ಲರ ಸ್ಥಿತಿ ಸದ್ಯ ಶೋಚನೀಯವಾಗಿದೆ. ಮನಃಪೂರ್ವಕ ಇಚ್ಛೆಯುಳ್ಳವರ ಪುನರ್ವಸತಿಯನ್ನು ಈಗಲಾದರೂ ತಕ್ಷಣವೇ ಮಾಡಬೇಕಿರುವುದು ಸರ್ಕಾರದ ನೈತಿಕ ಜವಾಬ್ದಾರಿಯಾಗಿದೆ.

ರೂಪ ಹಾಸನ,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT