ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಯೋಜನೆ: ಒಂದಕ್ಕೆ ಹಸಿರು, ಮತ್ತೊಂದಕ್ಕೆ ಕೆಂಪು ಸಿಗ್ನಲ್‌

Last Updated 1 ಮಾರ್ಚ್ 2019, 20:01 IST
ಅಕ್ಷರ ಗಾತ್ರ

‘ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆಗೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಾರೆ, ತಡೆಯಾಜ್ಞೆ ತರುತ್ತಾರೆ ಮತ್ತು ಸರ್ಕಾರ ಸುದೀರ್ಘ ಕಾನೂನು ಹೋರಾಟ ಮಾಡಬೇಕಾಗುತ್ತದೆ’ ಎಂದು ಹೇಳಿದ್ದ ಕೇಂದ್ರ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌, ದಟ್ಟಡವಿಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸಾಗುವ ಮೈಸೂರು- ಕುಶಾಲನಗರ ಹೊಸ ರೈಲು ಯೋಜನೆಗೆ ಅನುಮತಿ ನೀಡಿದ್ದು ಆಶ್ಚರ್ಯಕರವಾಗಿದೆ. ಈ ದ್ವಿಮುಖ ನೀತಿಯ ಹಿಂದಿನ ಉದ್ದೇಶ ಏನು ಎಂಬುದನ್ನು ಅವರು ತಿಳಿಸಬೇಕು.

ಮೈಸೂರು– ಕುಶಾಲನಗರ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬದ್ಧತೆ ನಿಜವಾಗಿಯೂ ಇದೆಯೇ ಅಥವಾ ಇದು ಚುನಾವಣಾಪೂರ್ವ ತಯಾರಿಯೇ? ಪರಿಸರಸೂಕ್ಷ್ಮ ಇರುವ ಈ ಎರಡೂ ಯೋಜನೆಗಳಲ್ಲಿ, ಒಂದಕ್ಕೆ ಹಸಿರು ಇನ್ನೊಂದಕ್ಕೆ ಕೆಂಪು ಸಿಗ್ನಲ್ ತೋರಿಸಲು ರೈಲ್ವೆ ಇಲಾಖೆಗೆ ಹೇಗೆ ಸಾಧ್ಯವಾಯಿತು?

-ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT