ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನಿ ನಡೆಯ ಹಿಂದಿನ ಕಾರಣ...

Last Updated 30 ಡಿಸೆಂಬರ್ 2020, 19:37 IST
ಅಕ್ಷರ ಗಾತ್ರ

ರಜನಿಕಾಂತ್‌ ಅವರು ರಾಜಕೀಯ ಪ್ರವೇಶಿಸದ ಮತ್ತು ಹೊಸ ರಾಜಕೀಯ ಪಕ್ಷ ಕಟ್ಟದಿರುವುದಕ್ಕೆ ನೀಡಿರುವ ‘ಆರೋಗ್ಯ’ದ ಕಾರಣ ಮೇಲ್ನೋಟಕ್ಕೆ ಸಹಜ ಎನಿಸುತ್ತದೆ. ಆದರೆ ಕಳೆದ ಕೆಲವು ವರ್ಷಗಳ ಅವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ ಅವರ ರಾಜಕೀಯ ಸಮೀಕರಣ ಮತ್ತು ಲೆಕ್ಕಾಚಾರ ನಿಗೂಢವೆನಿಸುತ್ತವೆ. ತಮಿಳುನಾಡಿನ ಇಂದಿನ ರಾಜಕೀಯ ಸ್ಥಿತಿಯಲ್ಲಿ ಚುನಾವಣೆ ಗೆದ್ದು ಅಧಿಕಾರ ಹಿಡಿಯುವುದು ಸುಲಭವಲ್ಲ ಎನ್ನುವ ವಾಸ್ತವವನ್ನು ಅವರು ತಿಳಿದುಕೊಂಡಿರಬಹುದು. ಆಂಧ್ರಪ್ರದೇಶದಲ್ಲಿ ಚಿರಂಜೀವಿ ಅವರು ಹತ್ತಿಪ್ಪತ್ತು ಸೀಟುಗಳನ್ನು ಗಳಿಸಿದಂತೆ ಆಗಬಾರದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ವಹಿಸಿರಬಹುದು.

ಭಾರತೀಯ ಜನತಾ ಪಕ್ಷದ ಬಗೆಗೆ ತಮಗಿರುವ ಒಲವು, ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕುವ ತಮಿಳುನಾಡಿನಲ್ಲಿ ತಮ್ಮನ್ನು ದಡ ಸೇರಿಸದು ಎನ್ನುವ ಸತ್ಯವೂ ಅವರಿಗೆ ಮನದಟ್ಟಾಗಿರಬಹುದು. ಮೂರು ತಿಂಗಳಿನಲ್ಲಿ ಪಕ್ಷವನ್ನು ಕಟ್ಟಿ ಗದ್ದುಗೆಗೆ ಏರುವುದು ಸಿನಿಮಾದಲ್ಲಿ ಮಾತ್ರ ಸಾಧ್ಯ ಎನ್ನುವ ರಾಜಕೀಯ ಸತ್ಯಾಸತ್ಯತೆಯ ಅರಿವು ಕೂಡಾ ಅವರಿಗೆ ಆಗಿರಬಹುದು.

-ರಮಾನಂದ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT