ಬುಧವಾರ, ಮೇ 25, 2022
31 °C

ಇದು ಜನರಂಜನೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಡಂಬನಕಾರ ವೀರ್ ದಾಸ್ ಅವರು ಅಮೆರಿಕದಲ್ಲಿ ನೀಡಿದ ಕಾರ್ಯಕ್ರಮದಲ್ಲಿ ‘ಎರಡು ಮುಖ ಹೊತ್ತ ಭಾರತ’ ಎಂದು ನಮ್ಮ (ತನ್ನ) ದೇಶವನ್ನು ಅಲ್ಲಿನ ಪ್ರೇಕ್ಷಕವರ್ಗದ ಮುಂದೆ ನಿಲ್ಲಿಸಿದ ರೀತಿ ಅತ್ಯಂತ ಹೇಯವಾಗಿದೆ. ಈತ ಸ್ಟ್ಯಾಂಡ್‌ಅಪ್ ಕಮಿಡಿಯನ್‌ ಎಂದು ಮಾಧ್ಯಮಗಳು ವಿವರಿಸಿವೆ. ಕಮಿಡಿಯನ್‌ ಎಂದರೆ ಜನರನ್ನು ನಗಿಸುವಾತ, ಹಾಸ್ಯನಟ, ಹಾಸ್ಯನಾಟಕಕಾರ. ಸ್ಟ್ಯಾಂಡ್‌ಅಪ್ ಎನ್ನುವ ವಿಶೇಷಣ ಪದದ ಅರ್ಥ ಪ್ರೇಕ್ಷಕವರ್ಗವನ್ನು ಹಾಸ್ಯದ ಮಾತುಗಳಿಂದ, ಸಂಗತಿಗಳಿಂದ ರಂಜಿಸುವಾತನೆಂದು. ಅಮೆರಿಕದ ಜನರ ಮುಂದೆ ತಾವು ಪ್ರಸ್ತಾಪಿಸಿದ ಸಂಗತಿಗಳಲ್ಲಿ ಕೆಲವು ಹೇಗೆ ಜನಮನರಂಜನೆಗಾಗಿ ಹೇಳಿದ ‘ಹಾಸ್ಯ’ದವು ಎನ್ನುವುದನ್ನು ಅವರೇ ವಿವರಿಸಬೇಕು.

ದೇಶವನ್ನು ಅಪಮಾನಿಸುವುದು ತಮ್ಮ ಉದ್ದೇಶವಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ ವೀರ್ ದಾಸ್. ಇವರ ಮನಸ್ಸಿನಲ್ಲಿ ಏನೇ ಇರಲಿ, ಅವರಾಡಿದ ಮಾತುಗಳ ವಾಚ್ಯಾರ್ಥ, ಧ್ವನ್ಯಾರ್ಥಗಳು ಭಾರತದ ಅವಹೇಳನವನ್ನೇ ತೋರಿಸುತ್ತವೆ. ಜನರಂಜನೆ ಎಂದರೆ ಇನ್ನೊಬ್ಬರನ್ನು ಅಥವಾ ಇನ್ನೊಂದು ದೇಶವನ್ನು ಕೀಳಾಗಿ ಕಾಣಿಸುವುದೇ?

-ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.