ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಅಭಿಪ್ರಾಯ ಹೇರದಿರಿ

Last Updated 13 ಏಪ್ರಿಲ್ 2022, 15:41 IST
ಅಕ್ಷರ ಗಾತ್ರ

ಕನ್ನಡದ ದೃಶ್ಯ ಮಾಧ್ಯಮಗಳಲ್ಲಿ ವಾರ್ತೆಗಳನ್ನು ಓದುವಾಗ, ಘಟನೆಗಳ ಸುದ್ದಿಗಳನ್ನು ಅಥವಾ ಪ್ರಮುಖರ ಹೇಳಿಕೆಗಳನ್ನು ತಿಳಿಸುವ ಜೊತೆಗೆ ವೈಯಕ್ತಿಕ ಅಭಿಪ್ರಾಯವನ್ನೂ ವೀಕ್ಷಕರ ಮೇಲೆ ಹೇರಲಾಗುತ್ತದೆ. ಒಂದು ಘಟನೆ ಅಥವಾ ಹೇಳಿಕೆಗೆ ಸಂಬಂಧಿಸಿದಂತೆ ಪೂರಕವಾದ ಹಿನ್ನೆಲೆ, ಕೆಲವೊಂದು ವಿವರಣೆ ನೀಡುವುದರಿಂದ ವೀಕ್ಷಕರು ವಿಷಯವನ್ನು ಸಮಗ್ರವಾಗಿ ಗ್ರಹಿಸಲು ಅನುಕೂಲವಾಗುತ್ತದೆ. ಉದಾಹರಣೆಗೆ, ಹಿಂದಿ ಭಾಷೆಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಬೆಳೆಸಲು ದೇಶದಾದ್ಯಂತ ಹಿಂದಿಗೆ ಪ್ರಾಮುಖ್ಯತೆ ನೀಡಬೇಕು ಎಂಬ ಕೇಂದ್ರ ಗೃಹ ಸಚಿವರ ಹೇಳಿಕೆ. ಇದಕ್ಕೆ ಪೂರಕವಾಗಿ, ನಮ್ಮ ಸಂವಿಧಾನದಲ್ಲಿ ಅಧಿಕೃತ ಭಾಷೆಗಳಾಗಿ ಪರಿಗಣಿಸಿರುವ ಭಾಷೆಗಳ ಬಗ್ಗೆ ಹಾಗೂ ಭಾರತದಲ್ಲಿ ಯಾವ ಭಾಷೆಯನ್ನೂ ರಾಷ್ಟ್ರೀಯ ಭಾಷೆಯಾಗಿ ಘೋಷಿಸಿಲ್ಲ ಎಂಬಂತಹ ಮಾಹಿತಿ ನೀಡಬಹುದು. ಅಲ್ಲದೆ ಅರವತ್ತರ ದಶಕದಲ್ಲಿ ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿಯ ಕಾರಣದಿಂದ ಆದ ಅನಾಹುತಗಳ ವಿವರ ನೀಡಬಹುದು.

ಈ ರೀತಿಯಾದ ಪೂರಕ ವಿವರಣೆಯಿಂದ, ವೀಕ್ಷಕರ ತಿಳಿವಳಿಕೆ ಹೆಚ್ಚುತ್ತದೆ ಹಾಗೂ ವಿಷಯದ ಬಗ್ಗೆ ಸ್ವತಂತ್ರ ಅಭಿಪ್ರಾಯ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ನಮ್ಮ ದೃಶ್ಯಮಾಧ್ಯಮದ ಮಿತ್ರರು, ಜಗತ್ತಿನಲ್ಲಿ ನಡೆಯುವ ಎಲ್ಲ ವಿದ್ಯಮಾನಗಳ ಬಗ್ಗೆ ಪರಿಣತಿ ಹೊಂದಿರುವ ರೀತಿಯಲ್ಲಿ, ಸುದ್ದಿಗಳೊಂದಿಗೆ ಅಧಿಕಾರಯುತವಾಗಿ ತಮ್ಮ ಅಭಿಪ್ರಾಯವನ್ನೂ ತಿಳಿಸುವ ಮುಖಾಂತರ ವೀಕ್ಷಕರನ್ನು ದಾರಿತಪ್ಪಿಸುತ್ತಿದ್ದಾರೆ.

ಡಾ. ಟಿ.ಜಯರಾಂ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT