ಕೋವಿಡ್ -19 ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಸರ್ಕಾರವು ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಕ್ರಮಗಳನ್ನು ಮಾತ್ರ ತೆಗೆದುಕೊಳ್ಳುತ್ತಿದೆ. ಶಿಕ್ಷಣದಷ್ಟೇ ಮಹತ್ವದ್ದಾಗಿರುವ ಬಿಸಿಯೂಟವನ್ನು ಪುನರ್‌ಚಾಲನೆಗೊಳಿಸದೇ ಇರುವುದರಿಂದ ನಿರ್ಣಾಯಕವಾದ ಈ ಯೋಜನೆಯನ್ನು ಅವಲಂಬಿಸಿದ್ದ ಮಕ್ಕಳಿಗೆ ತೀವ್ರ ಹೊಡೆತ ಬಿದ್ದಿದೆ.

ಸಾಂಕ್ರಾಮಿಕದ ಪರಿಸ್ಥಿತಿ ಇನ್ನೂ ಹಲವು ತಿಂಗಳುಗಳವರೆಗೆ ಮುಂದುವರಿಯುತ್ತದೆ ಎಂದು ನಿರೀಕ್ಷಿಸ ಲಾಗಿದೆ. ಹೀಗಿರುವಾಗ ಬಿಸಿಯೂಟಕ್ಕೆ ತಕ್ಷಣ ಚಾಲನೆ ಸಿಗದೇ ಹೋದರೆ ಮಕ್ಕಳ ಆರೋಗ್ಯ ಮತ್ತು ಪೌಷ್ಟಿ ಕಾಂಶದ ಸ್ಥಿತಿ ಮತ್ತಷ್ಟು ಹದಗೆಡಬಹುದು. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನ ಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಕ್ಕಳಲ್ಲಿ ಪೌಷ್ಟಿಕಾಂಶದ ಅಸಮತೋಲನವನ್ನು ಸರಿ ದೂಗಿಸುವುದೂ ಒಂದು. ಹೀಗಾಗಿ, ಸಿರಿಧಾನ್ಯಗಳು ಮತ್ತು ತರಕಾರಿಗಳೊಂದಿಗೆ ಬಿಸಿಯೂಟವನ್ನು ಪೂರೈಸಬೇಕಾಗಿದೆ.

- ಪ್ರವೀಣ ನಾಗಪ್ಪ ಯಲವಿಗಿ, ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.