ಸಂಸ್ಕೃತಿ ಪೋಷಣೆ ಕೆಲಸ

ಸೋಮವಾರ, ಮೇ 27, 2019
33 °C

ಸಂಸ್ಕೃತಿ ಪೋಷಣೆ ಕೆಲಸ

Published:
Updated:

ಬೆಂಗಳೂರಿನಲ್ಲಿ ಅನೇಕ ಸಂಘ–ಸಂಸ್ಥೆಗಳು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಲೇ ಇರುತ್ತವೆ. ಅಂತಹ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ಲಕ್ಷಾಂತರ ರೂಪಾಯಿ ಕೊಟ್ಟು ಚಲನಚಿತ್ರ ಕಲಾವಿದರನ್ನು (ಮುಖ್ಯವಾಗಿ ಬಾಲಿವುಡ್‌ ಕಲಾವಿದರನ್ನು) ಕರೆಸಲಾಗುತ್ತದೆ. ಅದಕ್ಕೆ ಜನರೂ ಸಾಗರೋಪಾದಿಯಲ್ಲಿ ಸೇರುತ್ತಾರೆ. ಕೆಲವೊಮ್ಮೆ ಸರ್ಕಾರ ಕೂಡ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಆದರೆ ಅದಕ್ಕೆ ಹೆಚ್ಚಿನ ಪ್ರಚಾರವನ್ನೇ ಕೊಡುವುದಿಲ್ಲ.

ಈಗ ಅಂತಹುದೇ ಒಂದು ಕಾರ್ಯಕ್ರಮವಾದ ‘ಪ್ರವಾಸಿ ಜಾನಪದ ಲೋಕೋತ್ಸವ’ವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಜಾನಪದ ಕಲಾಪರಿಷತ್ತು ರಾಮನಗರದ ಜಾನಪದ ಲೋಕದಲ್ಲಿ ಕಳೆದ ವಾರಾಂತ್ಯದಲ್ಲಿ ನಡೆಸಿದವು. ಇದು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವಾಗಿತ್ತು.

ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಡೆದರೆ ನಮ್ಮ ಸಂಸ್ಕೃತಿಯನ್ನು, ಜೊತೆಗೆ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಈ ಮೊದಲು ಬೆಂಗಳೂರಿನ ಲಾಲ್‌ಬಾಗ್‌ ಹಾಗೂ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ನಡೆಸುತ್ತಿತ್ತು ಹಾಗೂ ಅದು ಜನಪ್ರಿಯವೂ ಆಗಿತ್ತು. ಇಂತಹ ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸಲು ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.

-ಕಡೂರು ಫಣಿಶಂಕರ್, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !