ಸೋಮವಾರ, ಆಗಸ್ಟ್ 2, 2021
20 °C

ರೈತವರ್ಗ ಪರಿತಪಿಸುವಂತೆ ಆಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಅಮಿತೋತ್ಸಾಹ ತೋರುತ್ತಿದೆ. ಈ ಮೊದಲು ₹ 25 ಲಕ್ಷದವರೆಗೆ ಕೃಷಿಯೇತರ ಆದಾಯ ಹೊಂದಿದ್ದವರು ಮಾತ್ರ ಕೃಷಿಭೂಮಿ ಖರೀದಿಸಬಹು
ದಾಗಿತ್ತು. ಈ ಕಾನೂನು ಜಾರಿಗೆ ಬಂದರೆ ಯಾರು ಬೇಕಾದರೂ ಕೊಳ್ಳಬಹುದು. ಆಗ ರಿಯಲ್ ಎಸ್ಟೇಟ್ ಉದ್ಯಮಿ ಗಳು, ಕೋಟ್ಯಧೀಶರು, ಆಗರ್ಭ ಶ್ರೀಮಂತರು ಸರದಿ ಸಾಲಿನಲ್ಲಿ ಕೃಷಿಭೂಮಿ ಖರೀದಿಸುವುದು ಖಂಡಿತ. ಆ ಬಳಿಕ ಅದು ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೋ?

ಈಗಾಗಲೇ ಹವಾಮಾನ ವೈಪರೀತ್ಯ, ಕೊರೊನಾ ತಂದಿಟ್ಟ ಬಿಕ್ಕಟ್ಟು, ಬೆಲೆ ಅನಿಶ್ಚಿತತೆ ಮೊದಲಾದ ಸಂಕಷ್ಟಗಳಿಂದ ಬಳಲಿ ಬೆಂಡಾಗಿರುವ ನಮ್ಮ ರೈತಾಪಿ ವರ್ಗ, ಆ ಕ್ಷಣದ ಆವೇಶಕ್ಕೊಳಗಾಗಿ ಭೂಮಿ ಮಾರಿ, ನಂತರ ಕೊಳ್ಳಲಾಗದೇ ಪರಿತಪಿಸುವುದು ಅಕ್ಷರಶಃ ಸತ್ಯ. ಭವಿಷ್ಯದಲ್ಲಿ ಬಹುತೇಕ ಕೃಷಿಭೂಮಿಯು ಉಳ್ಳವರ ಪಾಲಾಗಿ, ನಾಡು ಕಾಂಕ್ರೀಟ್ ಕಾಡಾದರೆ ನಾವು ಉಣ್ಣುವುದೇನನ್ನು, ಮಣ್ಣನ್ನೇ? ನೋಟುಗಳನ್ನೇ? ಸರ್ಕಾರ ಯಾವುದೇ ಆಮಿಷಕ್ಕೆ ಬಗ್ಗದೆ ಈ ರೈತ ವಿರೋಧಿ ಕಾನೂನನ್ನು ಜಾರಿಗೊಳಿಸದಿರುವ ಮೂಲಕ ರೈತರ ಹಿತ ಕಾಯಬೇಕು.

ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.