ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ | ವಾಸ್ತವಕ್ಕೆ ಹಿಡಿದ ಕನ್ನಡಿ

ಅಕ್ಷರ ಗಾತ್ರ

ಕೆಲವು ಅಧ್ಯಾಪಕರ ಅಸಮರ್ಥತೆಯ ಬಗ್ಗೆ ಡಾ. ದಾದಾಪೀರ್ ನವಿಲೇಹಾಳ್ ಅವರ ಲೇಖನ (ಪ್ರ.ವಾ., ಜೂನ್‌ 13) ಮಾರ್ಮಿಕವಾಗಿತ್ತು. ಇಂದಿನ ಅನೇಕ ಕಾಲೇಜು, ವಿಶ್ವವಿದ್ಯಾಲಯಗಳ ಅಧ್ಯಾಪಕರು, ಉಪನ್ಯಾಸಕರು ಖಂಡಿತವಾಗಿ ನಾನ್ ಅಕಾಡೆಮಿಕ್ ಆಗಿದ್ದಾರೆ.ಕೇವಲ ಮುದ್ರಿತ ನೋಟ್ಸ್, ಗೈಡ್‌ಗಳನ್ನು ಕೊಟ್ಟು, ವೇತನದ ದಾರಿ ಕಾಯುವ ಮನಃಸ್ಥಿತಿ ಹೊಂದಿದ್ದಾರೆ. ಪರಿಸ್ಥಿತಿ ಎಲ್ಲಿಯವರೆಗೆ ತಲುಪಿದೆಯೆಂದರೆ ‘ಬಿಲ್ ಮತ್ತು ಬೆಲ್’, ಅಂದರೆ ವೇತನದ ಬಿಲ್ ನೋಡುವುದು, ಕಾಲೇಜಿನ ಬೆಲ್ ನೋಡುವುದು ಎಂಬಂತೆ ಆಗಿದೆ.

ಸ್ಟಾಫ್ ರೂಮ್‌ಗಳಲ್ಲಿ ಬಹುಪಾಲು ವೈಯಕ್ತಿಕ ವಿಚಾರಗಳು, ಜಾತಿ ಆಧಾರಿತ ಮಾತುಗಳು, ಗೃಹಕೃತ್ಯಕ್ಕೆ ಸಂಬಂಧಪಟ್ಟ ಮಾತು ಬಿಟ್ಟರೆ ಅಕಾಡೆಮಿಕ್ ಸಂವಾದಗಳು ನಡೆಯುವುದೇ ವಿರಳ. ಅಪ್ಪಿತಪ್ಪಿ ಅವರಲ್ಲೇ ಒಬ್ಬ ಅಧ್ಯಾಪಕನೇನಾದರೂ ವಿದ್ಯಾರ್ಥಿಗಳೊಂದಿಗೆ ಸಕ್ರಿಯವಾಗಿದ್ದರೆ ಕಥೆ ಮುಗಿಯಿತು! ಪ್ರಸ್ತುತ ಲೇಖಕರ ಬರಹವು ವಾಸ್ತವಕ್ಕೆ ಹಿಡಿದ ಕನ್ನಡಿ.

ಕಿರಣ್ ಕುಮಾರ್ ಯು.ಸಿ.,ಸವಳಂಗ, ಹೊನ್ನಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT