ನಾವು ಚಿಕ್ಕವರಾಗಿದ್ದಾಗ ‘ವಿವಿಧಭಾರತಿ’ಯಲ್ಲಿ ಕೇಳಿಬರುತ್ತಿದ್ದ ಆ ಚಿತ್ರಗೀತೆಗಳು ಕಿವಿಗೆ ಇಂಪು, ಮನಸಿಗೆ ತಂಪು, ಉಲ್ಲಾಸ, ಉತ್ಸಾಹವನ್ನು ಕೊಡುತ್ತಿದ್ದವು. ಈ ಗೀತೆಗಳ ಸಂಗೀತ ಸಂಯೋಜಕರು ರಾಜನ್- ನಾಗೇಂದ್ರ ಎಂದು ತಿಳಿದಾಗ, ಅವರು ಒಬ್ಬರೋ ಅಥವಾ ಇಬ್ಬರೋ ಎಂಬುದು ತಿಳಿಯದೆ ಗೊಂದಲದಲ್ಲಿದ್ದೆವು. ಕೆಲವು ವರ್ಷಗಳ ನಂತರ ಅವರು ಇಬ್ಬರೆಂಬುದು ತಿಳಿಯಿತು.

ರಾಜನ್ ಅವರಂತಹ ಮಹಾನ್ ಸಂಗೀತ ನಿರ್ದೇಶಕರು ನಮ್ಮ ಜೊತೆ ಇದ್ದರೂ ಅವರೇಕೆ ಸಂಗೀತ ನಿರ್ದೇಶನ ಮಾಡುತ್ತಿಲ್ಲ, ನಮ್ಮ ಸಿನಿಮಾ ತಯಾರಕರು ಅಂತಹವರನ್ನೇಕೆ ಮರೆತುಬಿಟ್ಟಿದ್ದಾರೆ ಎಂದು ನಾವು ಈಚಿನ ವರ್ಷಗಳಲ್ಲಿ ಅಂದುಕೊಳ್ಳುತ್ತಿದ್ದೆವು. ಇಂದು ಅವರು ನಮ್ಮನ್ನು ಅಗಲಿರುವುದು ನೋವಿನ ಸಂಗತಿ. ಹಿರಿಯ ತಲೆಮಾರಿನ ಮಾಣಿಕ್ಯಗಳೆಲ್ಲ ಒಬ್ಬೊಬ್ಬರಾಗಿ ನಮ್ಮನ್ನು ಬಿಟ್ಟುಹೋಗುತ್ತಿರುವುದು ನಮ್ಮೊಳಗೇ ಹಾಗೂ ಚಿತ್ರರಂಗದಲ್ಲಿ ಒಂದು ಶೂನ್ಯವನ್ನು ಸೃಷ್ಟಿಸುತ್ತಾ ಹೋಗುತ್ತಿದೆ ಎನಿಸುತ್ತಿದೆ.

- ನಾಗರಾಜ ಕೆ. ಮಾದೇಗೌಡ, ಕನಕಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.