ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಗೀತೆ ಬದಲಾವಣೆ ಆದ್ಯತೆಯೇ?

ಅಕ್ಷರ ಗಾತ್ರ

ನಮ್ಮ ರಾಷ್ಟ್ರಗೀತೆಯಲ್ಲಿರುವ ಕೆಲವು ಪದಗಳ ಬಗೆಗೆ ಆಕ್ಷೇಪ ವ್ಯಕ್ತಪಡಿಸಿರುವ ಹಿರಿಯ ರಾಜಕಾರಣಿ
ಡಾ. ಸುಬ್ರಮಣಿಯನ್‌ ಸ್ವಾಮಿ, ಅವನ್ನು ಬದಲಿಸಬೇಕು ಎಂದು ಪ್ರಧಾನಿಗೆ ಪತ್ರಮುಖೇನ ಒತ್ತಾಯಿಸಿದ್ದಾರೆ. ಅವರ ಆಕ್ಷೇಪದಲ್ಲಿ ಅರ್ಥವಿಲ್ಲದಿಲ್ಲ. ಆದರೆ, ದೇಶವು ಕೊರೊನಾ ವಿರುದ್ಧ ಹೋರಾಡುತ್ತಿರುವಾಗ, ಆರ್ಥಿಕತೆ ಹೊಯ್ದಾಡುತ್ತಿರುವಾಗ, ನಿರುದ್ಯೋಗ ಹೆಚ್ಚುತ್ತಿರುವಾಗ, ತೈಲದ ಬೆಲೆ ಗಗನಕ್ಕೆ ಏರುತ್ತಿರುವಾಗ, ಭೂಸುಧಾರಣೆ ಕಾಯ್ದೆಗಳ ವಿರುದ್ಧ ರೈತರು ಬೀದಿಗಿಳಿದಿರುವಾಗ, ಡಾ. ಸ್ವಾಮಿಯವರು ಈ ವಿಷಯಗಳ ಬಗೆಗೆ ಪ್ರಧಾನಿಯ ಗಮನ ಸೆಳೆದು ಸಲಹೆ ನೀಡದೆ, ರಾಷ್ಟ್ರಗೀತೆಯ ಬದಲಾವಣೆ ಬಗೆಗೆ ಪತ್ರ ಬರೆದಿರುವುದು ಸರಿಯಲ್ಲ. ಸ್ವಾಮಿಯವರಿಂದ ಜನ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ಇತ್ತೀಚೆಗೆ ಕೋರ್‌ ವಿಷಯಗಳ ಬದಲು, ಸ್ಥಳಗಳ ಹೆಸರು ಬದಲಾವಣೆ, ಪ್ರತಿಮೆ ಸ್ಥಾಪನೆಯಂಥ ಸಂಗತಿಗಳೇ ಆದ್ಯತೆ ಪಡೆಯುತ್ತಿರುವುದು ವಿಷಾದನೀಯ.

- ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT