ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕರಿನೀರಿನ ಶಿಕ್ಷೆ ವಿಧಿಸಿದ್ದೇಕೆ?

Last Updated 16 ಆಗಸ್ಟ್ 2022, 19:44 IST
ಅಕ್ಷರ ಗಾತ್ರ

‘ಜಾಣಕುರುಡು’ ಎಂಬ ಪದಕ್ಕೆ ವೈ.ಗ.ಜಗದೀಶ್‌ ಅವರ ಲೇಖನದಲ್ಲಿನ (ಪ್ರ.ವಾ., ಆ. 16) ‘ಬ್ರಿಟಿಷರ ವಿರುದ್ಧ ಸಾವರ್ಕರ್ ಎಲ್ಲಿ ಹೋರಾಡಿದರು?’ ಎಂಬ ಸಾಲು ಉತ್ತಮ ಉದಾಹರಣೆ.

ಹಾಗಾದರೆ ಬ್ರಿಟಿಷ್ ಸರ್ಕಾರವು ಸಾವರ್ಕರ್ ಅವರಿಗೆ ಕರಿನೀರಿನ ಶಿಕ್ಷೆಯನ್ನು ಯಾಕೆ ವಿಧಿಸಿತು? ಉನ್ನತ ವ್ಯಾಸಂಗ ಮಾಡಿದ ವ್ಯಕ್ತಿ ತನ್ನ ತುಂಬು ಯೌವನದ ಹದಿಮೂರು ವರ್ಷಗಳನ್ನು, ನರಕ ಎಂದೇ ಕುಖ್ಯಾತವಾಗಿದ್ದ ದೂರದ ಜೈಲಿನಲ್ಲಿ ಕಳೆದಿದ್ದು ಸುಳ್ಳೇ?

ಆ ನರಕಸದೃಶ ಜೈಲಿನಲ್ಲಿ ಅದೆಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಥವಾ ನಿಶ್ಶಕ್ತರಾಗಿ ಅನಾರೋಗ್ಯಕ್ಕೆ ತುತ್ತಾಗಿ ಸತ್ತಿದ್ದಾರೆ. ಸಾವರ್ಕರ್ ತೆಗೆದುಕೊಂಡ ತೀರ್ಮಾನ ಸರಿಯಾಗಿತ್ತು. ಆ ನರಕದಿಂದ ಪಾರಾಗಲು ಯಾರೇ ಆಗಲಿ ಹಾಗೇ ಮಾಡುತ್ತಿದ್ದರು.
-ಸುಬ್ರಮಣ್ಯ ಮಾಚಿಕೊಪ್ಪ,ಕಲ್ಕೆರೆ, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT