ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ತಲೆಮಾರಿನ ನೆನಪುಗಳಿಗೆ ಸಾವೆಲ್ಲಿದೆ?

ಅಕ್ಷರ ಗಾತ್ರ

ಈಚೆಗೆ ನಿಧನರಾದ ಚಿತ್ರನಟ ರಾಜೇಶ್ ಅವರನ್ನು ನೆನೆದಾಗಲೆಲ್ಲ ‘ನಮ್ಮ ಊರು’ ಸಿನಿಮಾದ ‘ಹೋಗದಿರಿ ಸೋದರರೇ...’ ಎಂಬ ಹಾಡು ನೆನಪಾಗುತ್ತದೆ. ಹಳ್ಳಿಯನ್ನು ತೊರೆದು ಪೇಟೆಗೆ ಹೊರಟ ಯುವಜನರನ್ನು ತಡೆಯಲೆತ್ನಿಸುವ ಈ ಹಾಡು ಇಂದಿಗೂ ತುಂಬ ಮನನೀಯವಾಗಿದೆ, ಪ್ರಸ್ತುತವಾಗಿದೆ. ಹಳ್ಳಿಯ ಬಾಳಿನ ಸೊಗಸು ಮತ್ತು ಸೌಹಾರ್ದವನ್ನು ನಿವೇದಿಸುವ ರಾಜೇಶ್ ಅವರ ಅಭಿನಯ ಮನನೀಯವಾಗಿದೆ. ‘ಬೆಳುವಲದ ಮಡಿಲಲ್ಲಿ’ ಎಂಬ ಅವರ ಸಿನಿಮಾ ಸಹ ರೈತರ ಪರಿ ಪರಿಯಾದ ಕಷ್ಟಗಳನ್ನು ನಿರೂಪಿಸಿದೆ. ಈ ಥರದ ನನ್ನ ತಲೆಮಾರಿನ ನೆನಪು ಗಳಿಗೆ ಸಾವೆಲ್ಲಿದೆ?

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT