ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಾಯಕರಿಗೆ ‘ಶಿಕ್ಷೆ’...!

Last Updated 25 ಜುಲೈ 2018, 19:30 IST
ಅಕ್ಷರ ಗಾತ್ರ

ಲಂಚ ಕೊಟ್ಟವರಿಗೆ ಗರಿಷ್ಠ ಏಳು ವರ್ಷ ಜೈಲುಶಿಕ್ಷೆ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಮಸೂದೆಗೆ ಸಂಸತ್ತು ಒಪ್ಪಿಗೆ ನೀಡಿರುವುದು ವರದಿಯಾಗಿದೆ.(ಪ್ರ.ವಾ., ಜುಲೈ 25). ಇದು ವಿಚಿತ್ರವಾಗಿದೆ.

ಜನರ ಕೆಲಸ–ಕಾರ್ಯಗಳನ್ನು ಸಕಾಲಕ್ಕೆ ಮಾಡಿಕೊಡುವುದು ಅಧಿಕಾರಿಗಳ ಕೆಲಸ. ಅದಕ್ಕಾಗಿ ಅವರು ಸಂಬಳ, ಸೌಲಭ್ಯ ಪಡೆಯುತ್ತಾರೆ. ಅದೇ ಕೆಲಸಕ್ಕಾಗಿಯೇ ಅವರು ನಿಯೋಜನೆಗೊಂಡವರು. ಅದರಲ್ಲಿ ವಿಫಲರಾದರೆ ಅವರನ್ನು ಕಠಿಣವಾಗಿ ದಂಡಿಸಲಿ.

ಅದು ಬಿಟ್ಟು ಅಧಿಕಾರಿಗಳ ಅಸಡ್ಡೆ, ವಿಳಂಬ ಧೋರಣೆಯಿಂದ ಬೇಸತ್ತು ಬೇರೆ ವಿಧಿಯಿಲ್ಲದೆ ಲಂಚ ಕೊಡುವ ಜನರನ್ನು ಶಿಕ್ಷಿಸಲು ಹೊರಟಿರುವುದು ಹಾಸ್ಯಾಸ್ಪದ ಅನಿಸುತ್ತದೆ.

ಲಂಚ ಪೀಕುವ ಒಂದೇ ಉದ್ದೇಶದಿಂದ ಸರ್ಕಾರಿ ನೌಕರರು ಜನಸಾಮಾನ್ಯರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಬಡವರು, ಮಹಿಳೆಯರು, ವಯೋವೃದ್ಧರು ಎಂಬ ಭೇದವಿಲ್ಲದೆ ಎಲ್ಲರನ್ನೂ ಪೀಡಿಸುತ್ತಾರೆ. ಬಹಿರಂಗವಾಗಿಯೇ ಲಂಚ ಕೇಳುತ್ತಾರೆ. ಅಂಥವರ ಲಜ್ಜೆ
ಗೇಡಿ ವರ್ತನೆಗೆ ಬಿಸಿ ತಾಕಿಸುವ ಬದಲು ಅಸಹಾಯಕ ಜನರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸಲು ಹೊರಟಿರುವುದು ಒಪ್ಪತಕ್ಕ ವಿಷಯವಲ್ಲ.

ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೂ ಹಣ ನೀಡಬೇಕಾದ ಪರಿಸ್ಥಿತಿ ಈ ದೇಶದಲ್ಲಿ ಇದೆ. ಆದರೂ ಸರ್ಕಾರಗಳು ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿವೆ. ಸಮಾಜಕ್ಕೆ ಪಿಡುಗಾಗಿ ಪರಣಮಿಸಿರುವ ಭ್ರಷ್ಟಾಚಾರವನ್ನು ನಿಗ್ರಹಿಸಿ ಪಾರದರ್ಶಕ ಆಡಳಿತ ನೀಡುವತ್ತ ಗಮನ ಹರಿಸುವುದು ಬಿಟ್ಟು ಅಸಹಾಯಕರ ಮೇಲೆ ಚಾಟಿ ಬೀಸಲು ಹೊರಟಿರುವುದು ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT