ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
Published 20 ಮೇ 2024, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಜೀವನದ ಬಗ್ಗೆ ಉತ್ಸಾಹ ತಾಳುವಿರಿ. ಸಂಗೀತಗಾರರಿಗೆ ಹಾಗೂ ನೃತ್ಯ ಕಲೆಗಳಿಗೆ ಪ್ರಾಧಾನ್ಯ ದೊರಕುವುದು. ಸ್ವಸಾಮರ್ಥ್ಯದಿಂದ ಆಗುವ ಕೆಲಸಗಳಿಗೆ ಇತರರ ಸಹಾಯವನ್ನು ಅಪೇಕ್ಷಿಸ ಬೇಡಿ.
ವೃಷಭ
ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಪರಿಣಾಮ ಬೀರುವ ಸಾಧ್ಯತೆ ಇದೆ. ದಿನಚರಿಯಲ್ಲಿ ಕೋಪ ಹಾಗೂ ಆಕ್ರಮಣಶೀಲತೆ ಗೋಚರವಾಗಬಹುದು.
ಮಿಥುನ
ತಮ್ಮನ ಕೆಲಸಕ್ಕಾಗಿ ಉನ್ನತ ಅಧಿಕಾರಿಗಳನ್ನು ಕಾಣಲು, ಅವರಿಂದ ಸಹಾಯ ಪಡೆಯಲು ದಿನವಿಡೀ ಓಡಾಟ ನಡೆಸುವಿರಿ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಬೆಳೆಸಿಕೊಳ್ಳಿ. ನೆರೆಯವರ ಸಂಬಂಧಗಳು ಸುಧಾರಿಸುವುದು.
ಕರ್ಕಾಟಕ
ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಪಾಠದ ರೂಪದಲ್ಲಿ ಮಗನಿಗೆ ಹೇಳುವ ಅನಿವಾರ್ಯತೆಯ ಸನ್ನಿವೇಶ ಎದುರಾಗುವುದು. ಉದ್ಯೋಗದ ಗೌಪ್ಯತೆಯನ್ನು ಬಿಟ್ಟುಕೊಡುವುದು ಸರಿಯಲ್ಲ.
ಸಿಂಹ
ಕುಟುಂಬದ ವ್ಯಕ್ತಿಗಳ ನಿರೀಕ್ಷೆಗಳನ್ನು ಸೂಕ್ಷ್ಮವಾಗಿ ತಿಳಿದು ಅದರಂತೆ ಬದುಕುವುದು ಸರ್ವಕ್ಷೇಮ. ಮಾಡುವ ಕೆಲಸದಿಂದಾಗಿ ಗುಂಪಿನಲ್ಲಿ ಗುರುತಿಸುವಂಥ ವ್ಯಕ್ತಿಯಾಗುವ ಲಕ್ಷಣ ಕಾಣುತ್ತಿದೆ.
ಕನ್ಯಾ
ಹವಾಮಾನದಲ್ಲಿ ಆಗುವ ಬದಲಾವಣೆ ಆರೋಗ್ಯದ ಮೇಲೆ ಸಂಪೂರ್ಣ ಪ್ರಭಾವ ಬೀರಲಿದೆ. ನಿರ್ದಿಷ್ಟ ಕೆಲಸಗಳನ್ನು ನಿರ್ದಿಷ್ಟವಾದ ಸಮಯದಲ್ಲಿ ಮಾಡಿ ಮುಗಿಸಿಕೊಳ್ಳುವಿರಿ. ಕೈತಪ್ಪಿ ಹೋದ ಹಣ ಪುನಃ ಕೈ ಸೇರುವುದು.
ತುಲಾ
ಎರಡನೇ ದರ್ಜೆಯ ನೌಕರರಿಗೆ ವರ್ಗಾವಣೆಯಿಂದ ಆರ್ಥಿಕವಾಗಿ ಅನುಕೂಲವಾಗುವುದು. ಲಾಭದಾಯಕವೆನಿಸುವ ವ್ಯಕ್ತಿಗಳೊಂದಿಗೆ ಮಾತ್ರ ಮಾತನಾಡುವುದು ಸರಿಯಲ್ಲ. ಶತ್ರುಗಳು ಮಿತ್ರರಾಗಲು ಬಯಸಿ ಬರುತ್ತಾರೆ.
ವೃಶ್ಚಿಕ
ತತ್ವ ಆದರ್ಶಗಳ ಜತೆಗೆ ಹಿರಿಯರ ಅನುಭವ ಸಲಹೆಗಳನ್ನು ಜೀವನ ದಲ್ಲಿ ಅಳವಡಿಸಿಕೊಳ್ಳಿರಿ. ಒಡನಾಡಿಗಳ ಪ್ರೀತಿ, ವಿಶ್ವಾಸ, ಸಹಕಾರದಿಂದ ಕಾರ್ಯವನ್ನು ಸುಲಭದಲ್ಲಿ ಸಾಧಿಸುವಿರಿ. ರಾಜಕಾರಣಿಗಳಿಗೆ ಶುಭ ಸುದ್ದಿ.
ಧನು
ಆರೋಗ್ಯದ ವಿಷಯದಲ್ಲಿ ಗೋಚರಕ್ಕೆ ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಅದನ್ನು ಪರಿಹರಿಸುವ ಬಗೆಯನ್ನು ಕಂಡುಹಿಡಿದರೆ ಉತ್ತಮ. ಹನುಮ ಸಮೇತನಾದ ಶ್ರೀರಾಮನ ಪರಿವಾರವನ್ನು ಆರಾಧಿಸಿ.
ಮಕರ
ಆರೋಗ್ಯದ ವಿಷಯದಲ್ಲಿ ಗೋಚರಕ್ಕೆ ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಅದನ್ನು ಪರಿಹರಿಸುವ ಬಗೆಯನ್ನು ಕಂಡುಹಿಡಿದರೆ ಉತ್ತಮ. ಹನುಮ ಸಮೇತನಾದ ಶ್ರೀರಾಮನ ಪರಿವಾರವನ್ನು ಆರಾಧಿಸಿ.
ಕುಂಭ
:ಆರಂಭಿಸಿದ ಕಾರ್ಯಗಳು ವಿಳಂಬಗತಿಯಲ್ಲಿ ಸಾಗಿದರೂ ದಿನಾಂತ್ಯದಲ್ಲಿ ಪೂರ್ಣಗೊಳ್ಳಲಿವೆ. ರಾಜಕೀಯ ವ್ಯಕ್ತಿಗಳು ಆತ್ಮವಂಚನೆಯ ಬಗ್ಗೆ ವಿಮರ್ಶಿಸಿಕೊಳ್ಳಿರಿ. ಕೈಗಾರಿಕೆ ನಡೆಸುವವರಿಗೆ ಖರ್ಚು ಸಂಭವಿಸಲಿದೆ.
ಮೀನ
ಶಿಕ್ಷಕ ವೃತ್ತಿಯನ್ನು ಮಾಡುವವರಿಗೆ ಬೋಧನಾ ಕೆಲಸಕ್ಕಿಂತ ಮುಖ್ಯ ವಾಗಿ ದಾಖಲೆಯ ನಿರ್ವಹಣೆ ತಲೆಬಿಸಿ ಎನಿಸಲಿದೆ. ಮನೆಯ ಆಗು-ಹೋಗುಗಳನ್ನು ಪೂರ್ಣಗೊಳಿಸಲು ಹಣಕಾಸಿನ ಕೊರತೆ ಅಷ್ಟಾಗಿ ಕಾಡದು.