ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮಂಜಸ ವಾದ ಮಂಡನೆ

ಅಕ್ಷರ ಗಾತ್ರ

ರಾಜ್ಯ ಉನ್ನತ ಶಿಕ್ಷಣ ಸಚಿವರು ಮಂಡಿಸಿರುವ ‘ತ್ರಿಭಾಷಾ’ ಸಮನ್ವಯ ಸೂತ್ರವು (ಸಂಗತ, ಜ. 27) ಸಂಸ್ಕೃತ ಪರವಾದ ಹಾಗೂ ಪ್ರಸ್ತುತ ಚರ್ಚೆಯ ವಿಷಯಕ್ಕೆ ಸಮಂಜಸವಲ್ಲದ ವಾದ ಮಂಡನೆಯಾಗಿದೆಯೇ ಪರಂತು ಸಮನ್ವಯ ಸೂತ್ರವಲ್ಲ ಎನ್ನಬೇಕಾಗಿದೆ. ಕನ್ನಡಿಗರು ಯಾರೂ ಸಂಸ್ಕೃತ ವಿರೋಧಿಗಳಲ್ಲವೇ ಅಲ್ಲ ಎಂಬುದನ್ನು ಇವರು ಮತ್ತು ಸಂಸ್ಕೃತ ವಿಶ್ವವಿದ್ಯಾಲಯದ ಪರವಾದಿಗಳು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ ಎಂಬುದೇ ಒಂದು ಯಕ್ಷಪ್ರಶ್ನೆಯಾಗಿದೆ. ನಿಜವಾದ ಪ್ರಶ್ನೆ ಏನೆಂದರೆ, ಆರು ಕೋಟಿ ಕನ್ನಡಿಗರ ಜೀವಭಾಷೆಯಾದ ಕನ್ನಡದ ಸಮಾಧಿಯ ಮೇಲೆ ಸಂಸ್ಕೃತದ ಭವ್ಯ ಸೌಧವನ್ನು ನಿರ್ಮಿಸಲು ಹೊರಟಿದ್ದೀರಲ್ಲ, ಯಾಕೆ ಎನ್ನುವುದು. ಇದು ನ್ಯಾಯವೇ?

ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಡಬೇಕಾದ ಎರಡು ಕೋಟಿ ಅನುದಾನವನ್ನು ಕೊಡದೆ ಸಂಸ್ಕೃತ
ವಿಶ್ವವಿದ್ಯಾಲಯಕ್ಕೆಂದು ನೂರು ಎಕರೆ ಜಮೀನು ಮತ್ತು ₹ 359 ಕೋಟಿ ಕೊಡುತ್ತಿದ್ದೀರಲ್ಲ, ಇದು ಯಾವ ಸಮನ್ವಯ? ಪ್ರಸ್ತುತ ಸಂದರ್ಭದಲ್ಲಿ ಇದರ ಅಗತ್ಯವಾದರೂ ಏನು ಎಂಬುದಕ್ಕೆ ಯಾರೂ ವಿವರಣೆ ನೀಡುತ್ತಿಲ್ಲ. ದೇಶದಲ್ಲಿ ಈಗಾಗಲೇ 18 ಸಂಸ್ಕೃತ ವಿಶ್ವವಿದ್ಯಾಲಯಗಳು ಇವೆ ಎನ್ನುತ್ತಾರೆ. ಅವುಗಳಲ್ಲಿ ಮತ್ತು ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಅಧ್ಯಯನಕ್ಕೆ ಅನೇಕ ಅವಕಾಶಗಳಿವೆ. ಆದರೆ ವಿದ್ಯಾರ್ಥಿಗಳೇ ಇಲ್ಲವೆಂದು ಕೇಳಲ್ಪಟ್ಟಿದ್ದೇವೆ. ಹೀಗಿರುವಾಗ, ಅದು ಆತ್ಮದ ಭಾಷೆ, ಎಲ್ಲ ಭಾಷೆಗಳಿಗೂ ಮಾತೃಸ್ಥಾನದಲ್ಲಿ ಇದೆ ಎಂಬಂತಹ ಭಾವನಾತ್ಮಕ ಅಂಶಗಳನ್ನೇ ಪ್ರಸ್ತುತಪಡಿಸುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು?

ವಾಸ್ತವದಲ್ಲಿ ಇಂದು ಗ್ರಾಮೀಣ ಪ್ರದೇಶಗಳನ್ನೂ ಒಳಗೊಂಡಂತೆ ಬಹುಮಂದಿ ಇಂಗ್ಲಿಷ್ ಭಾಷೆಯ ಮೊರೆ ಹೊಕ್ಕಿದ್ದಾರೆ. ಅದು ಇಂದು ನಮ್ಮ ದೇಶವಾಸಿಗಳನ್ನು ಬೆಸೆದಿರುವ ಭಾಷೆಯಾಗಿದೆ. ಅದೇ ಮುಂದುವರಿಯಲಿ ಬಿಡಿ. ಅದರ ಸ್ಥಾನದಲ್ಲಿ ನೀವು, ಯಾರೂ ಮಾತನಾಡದ (ಮತ್ತೂರು ಒಂದು ಅರ್ಥಹೀನ ಉದಾಹರಣೆ) ಸಂಸ್ಕೃತವನ್ನು ಸ್ಥಾಪಿಸ ಹೊರಟಿರುವುದು ನಿರರ್ಥಕವಾದುದು. ಜೊತೆಗೆ ಜನಪರವಾದುದಲ

- ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT