ಆಘಾತಕಾರಿ ಹೇಳಿಕೆ

7

ಆಘಾತಕಾರಿ ಹೇಳಿಕೆ

Published:
Updated:

‘ಭಯೋತ್ಪಾದಕ ಶಕ್ತಿಗಳಿಗೆ ಪರೋಕ್ಷ ಬೆಂಬಲ ನೀಡುವವರನ್ನೂ ಸದೆಬಡಿದು ಮುಗಿಸಬೇಕು’ (ಪ್ರ.ವಾ., ಸೆ.4) ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಹುಕುಂ ಹೊರಡಿಸಿರುವುದು ಆಘಾತಕಾರಿಯಾದುದು. ನಮ್ಮಲ್ಲಿ ಕಾನೂನು ಇದೆ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ನ್ಯಾಯಾಂಗ ಇದೆ ಎಂಬುದನ್ನೇ ಅರಿಯದವರಂತೆ ಪ್ರಚೋದನಕಾರಿಯಾಗಿ ಸಿಡಿದಿರುವುದು ಖಂಡನೀಯವೇ ಸರಿ.

ಸರ್ಕಾರದ ಕೆಲ ನಡಾವಳಿಗಳನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದವರಿಗೆ ದೇಶದ್ರೋಹಿಗಳೆಂದು ಹಣೆಪಟ್ಟಿ ಅಂಟಿಸುವುದು, ಅವರ ಮೇಲೆ ದೌರ್ಜನ್ಯ ಎಸಗುವುದು ಪ್ರಜಾತಂತ್ರಕ್ಕೆ ಎಸಗಿದ ಅಪಚಾರ.

-ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !