ಭಾನುವಾರ, ಅಕ್ಟೋಬರ್ 20, 2019
21 °C

ವಿದ್ಯಾರ್ಥಿನಿಗೆ ಹೈಕೋರ್ಟ್ ಮಂಗಳಾರತಿ: ಪೋಷಕರ ಪ್ರೀತಿ ಪ್ರಶ್ನಾತೀತ

Published:
Updated:

‘ಮತ್ತೊಬ್ಬರ ಮನೆಯ ಆಂತರಿಕ ವಿಷಯದಲ್ಲಿ ಮೂಗು ತೂರಿಸಲು ನಿಮಗೇನು ಅಧಿಕಾರ? ತೆಪ್ಪಗೆ ನಿಮ್ಮ ಕೆಲಸ ಮಾಡಿಕೊಂಡಿರಿ’ ಎಂದು, ಸ್ನೇಹಿತನ ವಿಷಯದಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸಿದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳಿಗೆ ಹೈಕೋರ್ಟ್ ಮಂಗಳಾರತಿ ಮಾಡಿದೆ (ಪ್ರ.ವಾ., ಅ. 3). ‘ನನ್ನ ಸ್ನೇಹಿತನ ಅನುಮತಿ ಇಲ್ಲದೆ ಆತನ ತಂದೆ– ತಾಯಿ ಆತನನ್ನು ಮಾದಕವಸ್ತು ವ್ಯಸನಮುಕ್ತಿ ಕೇಂದ್ರದಲ್ಲಿ ಇರಿಸಿದ್ದಾರೆ’ ಎಂಬ ಆ ಯುವತಿಯ ಆಕ್ಷೇಪದಲ್ಲಿ ಹುರುಳಿಲ್ಲ. ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ಕುರಿತು ಚಿಂತೆ, ಕಾಳಜಿ ತಂದೆ-ತಾಯಿಗಲ್ಲದೆ ಬೇರೆಯವರಿಗೆ ಇರಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ನ್ಯಾಯಾಲಯವು ವಿದ್ಯಾರ್ಥಿನಿಗೆ ಕೊಟ್ಟಿರುವ ಎಚ್ಚರಿಕೆ ಸರಿಯಾಗಿದೆ. ಅತ್ಯಂತ ಜವಾಬ್ದಾರಿಯ, ವೈದ್ಯಕೀಯ ವೃತ್ತಿ ನಿರ್ವಹಿಸುತ್ತಿರುವ ಹುಡುಗನ ತಂದೆ-ತಾಯಿಗೆ ಈ ಯುವತಿ ಅನಗತ್ಯವಾಗಿ ತೊಂದರೆ ಕೊಟ್ಟಿರುವುದನ್ನು ಗಣನೆಗೆ ತೆಗೆದುಕೊಂಡರೆ, ಆಕೆಯ ವಿಷಯದಲ್ಲಿ ನ್ಯಾಯಾಲಯ ಉದಾರವಾಗಿಯೇ ನಡೆದುಕೊಂಡಿದೆ ಎನಿಸುತ್ತದೆ.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

 

Post Comments (+)