ಸೋಮವಾರ, ಏಪ್ರಿಲ್ 12, 2021
31 °C

ಸಾಲಕ್ಕಾಗಿ ಅವಾಸ್ತವಿಕ ನಿಯಮ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬೀದಿ ಬದಿಯ ವ್ಯಾಪಾರಸ್ಥರು ಸಾಲ ಪಡೆಯಲು ಯುಪಿಐ ಐ.ಡಿ ಹೊಂದಿರಬೇಕು. ಇದಕ್ಕಾಗಿ ಅವರು ಸ್ಮಾರ್ಟ್‌ ಫೋನ್‌ ಹೊಂದಿರಲೇಬೇಕಾದಂತಹ ಅನಿವಾರ್ಯ ಸ್ಥಿತಿ ಸೃಷ್ಟಿಯಾಗಿರುವುದು ಎಷ್ಟು ಸರಿ? ಕೋವಿಡ್‌ನಿಂದ ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೀದಿ ಬದಿಯ ವ್ಯಾಪಾರಸ್ಥರು ಸರ್ಕಾರದಿಂದ ₹ 10 ಸಾವಿರ ಸಾಲ ಸೌಲಭ್ಯ ಪಡೆಯಲು ಸ್ಮಾರ್ಟ್ ಫೋನ್ ಖರೀದಿ ಮಾಡಬೇಕಾಗುತ್ತದೆ. ಇದಕ್ಕೆ ಕನಿಷ್ಠ ₹ 8 ಸಾವಿರದಿಂದ ₹ 10 ಸಾವಿರ ಬೇಕಾಗುತ್ತದೆ. ಅದಕ್ಕೆ ಯಾರು ಸಾಲ ಕೊಡುತ್ತಾರೆ? ಜೊತೆಗೆ ಸ್ಮಾರ್ಟ್‌ ಫೋನ್‌ ಬಳಸಲು ಬರದೇ ಇರುವವರ ಪಾಡೇನು?

ಈ ವ್ಯಾಪಾರಿಗಳಲ್ಲಿ ಹಲವರು ಬ್ಯಾಂಕ್‌ನ ಅರ್ಜಿ ತುಂಬಿಸಲೇ ಬಾರದೆ ಒದ್ದಾಡುತ್ತಾರೆ. ಹೀಗಿರುವಾಗ ಇನ್ನು ಸ್ಮಾರ್ಟ್ ಫೋನ್ ಬಳಕೆ ಬಗ್ಗೆ ಅವರಿಗೆ ತರಬೇತಿ ನೀಡುವವರು ಯಾರು? ಸಾಲ ಕೊಡುವ ಸಲುವಾಗಿ ಈ ವ್ಯಾಪಾರಸ್ಥರನ್ನು ಇನ್ನಷ್ಟು ಸಂಕಷ್ಟಕ್ಕೆ ಗುರಿ ಮಾಡುವುದು ಸರಿಯಲ್ಲ.

- ಜ್ಯೋತಿ ಭಾಸ್ಕರ್, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.