ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಇದೆ; ತುರ್ತು ಪರಿಸ್ಥಿತಿ ಅಲ್ಲ!

Last Updated 13 ಮಾರ್ಚ್ 2019, 18:46 IST
ಅಕ್ಷರ ಗಾತ್ರ

‘ಸಾಮಾಜಿಕ ಜಾಲತಾಣಗಳಲ್ಲಿಚುನಾವಣಾ ಪ್ರಚಾರ ಮಾಡಿದರೆ ಜೈಲು ಗ್ಯಾರಂಟಿ, ವಾಟ್ಸ್‌ ಆ್ಯಪ್ ಅಡ್ಮಿನ್‍ಗಳೇ ಎಚ್ಚರ, ನಿಮ್ಮ ಗುಂಪಿನಲ್ಲಿ ಚುನಾವಣಾ ಪ್ರಚಾರಕ್ಕೆ ಅವಕಾಶ ಕೊಡಬೇಡಿ. ಹಾಗೆ ಮಾಡಿದರೆ ಕಾನೂನು ಪ್ರಕಾರ ನಿಮಗೆ ಶಿಕ್ಷೆ ಖಚಿತ’ ಎಂದೆಲ್ಲಾ ಸರಣಿ ಸುಳ್ಳುಗಳನ್ನು ನಮ್ಮ ನಡುವಿನ ಒಂದಷ್ಟು ಅವಿವೇಕಿಗಳು ಹರಡುತ್ತಿದ್ದಾರೆ.ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ರೂಪು ರೇಷೆಗಳನ್ನು ಅರಿತುಕೊಳ್ಳದವರ ಕೃತ್ಯ ಇದು.

ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವತ್ತೂ ಅವಕಾಶವಿದೆ. ಚುನಾವಣಾ ನೀತಿ ಸಂಹಿತೆ ಅದಕ್ಕೆ ಅಡ್ಡಿ ಮಾಡಲಾರದು. ನಿಮಗಿಷ್ಟವಾದ ಪಕ್ಷದ ಪರವಾಗಿ ಅಥವಾ ಯಾವುದೇ ಅಭ್ಯರ್ಥಿ ಮತ್ತು ಅವರ ಸಾಧನೆಗಳ ಬಗೆಗೆ ನೀವು ನಿರಂತರವಾಗಿ ಫೇಸ್‍ಬುಕ್, ವಾಟ್ಸ್‌ ಆ್ಯಪ್‌ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಎಷ್ಟು ಹೊತ್ತಿಗೆ ಬೇಕಾದರೂ ಕಾನೂನಿನ ಚೌಕಟ್ಟಿನಲ್ಲಿ ಖಂಡಿತಾ ಪ್ರಚಾರ ಮಾಡಬಹುದು. ಅದು ನಿಮ್ಮ ಹಕ್ಕು ಕೂಡ. ದೇಶದಲ್ಲಿ ಘೋಷಣೆಯಾಗಿರುವುದು ನೀತಿ ಸಂಹಿತೆಯೇ ಹೊರತು ತುರ್ತು ಪರಿಸ್ಥಿತಿ ಅಲ್ಲ.

ಚುನಾವಣಾ ಆಯೋಗವು ಅಭ್ಯರ್ಥಿಗಳ ಚುನಾವಣಾ ಖರ್ಚಿನ ಬಗೆಗೆ ಗಮನ ಇಡುವುದರಿಂದ, ಪೇಯ್ಡ್ ಸುದ್ದಿಗಳ ಬಗೆಗೆ ಮತ್ತು ಅಭ್ಯರ್ಥಿಗಳ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ಕಣ್ಣಿಟ್ಟಿರುತ್ತದೆ ಅಷ್ಟೆ. ನೀವು ಮಾಡುವ ಚುನಾವಣಾ ಪ್ರಚಾರಗಳಿಂದ ನಿಮ್ಮ ಮೇಲೆ ಯಾರೂ ಕ್ರಮ ಕೈಗೊಳ್ಳಲು ಅಥವಾ ಸುಖಾಸುಮ್ಮನೆ ಪೊಲೀಸರು ಬಂಧಿಸಲು ಸಾಧ್ಯವಿಲ್ಲ. ಆದರೆ ನೆನಪಿರಲಿ, ಪ್ರಚಾರದ ನೆಪದಲ್ಲಿ ಬೇರೆಯವರನ್ನು ಅಕಾರಣವಾಗಿ ವೈಯಕ್ತಿಕವಾಗಿ ನಿಂದಿಸುವುದು, ಅವಹೇಳನ ಮಾಡುವುದು ಕಾನೂನಿನ ಪ್ರಕಾರ ಖಂಡಿತಾ ತಪ್ಪು. ಹಾಗಾದಾಗ ಮಾತ್ರ ನಿಮ್ಮ ಮೇಲೆ ಮೊಕದ್ದಮೆ ಹೂಡಿ, ಕ್ರಮ ಜರುಗಿಸಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT