ಭಾನುವಾರ, ಆಗಸ್ಟ್ 1, 2021
25 °C

ವಾಚಕರವಾಣಿ | ಯುವಜನರಲ್ಲಿ ಸಮಾನತೆಯ ಅರಿವು ಮೂಡಿಸಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಾನವ ಸಂಪನ್ಮೂಲ ಮತ್ತು ಸ್ತ್ರೀ ಸೌಖ್ಯ’ ಎಂಬ ಸತೀಶ್‌ ಜಿ.ಕೆ. ತೀರ್ಥಹಳ್ಳಿ ಅವರ ಲೇಖನ (ಸಂಗತ, ಜುಲೈ 11) ಅರ್ಥಪೂರ್ಣವಾದ ಚಂದದ ಬರಹವಾಗಿದ್ದು, ಹೆಣ್ಣುಮಕ್ಕಳ ಘನತೆಯನ್ನು ಸಾರುವಂತಿದೆ.

ಬದುಕಿನ ಮೌಲ್ಯಗಳಿಗಾಗಿ ಹೋರಾಡುತ್ತಿರುವ ಈ ಹೊತ್ತಿನಲ್ಲಿ ಸ್ತ್ರೀ ಸಮಾನತೆಯ ನಿಖರ ಅರಿವನ್ನು ನಮ್ಮ ಚಲನಶೀಲ ಯುವಜನರಿಗೆ ಅಗತ್ಯವಾಗಿ ನೀಡಬೇಕೆನಿಸುತ್ತದೆ.

ಧಾರ್ಮಿಕ ಕಾರಣಗಳನ್ನೊಡ್ಡಿ ಸ್ತ್ರೀಯರಿಗೆ ಅವಕಾಶಗಳನ್ನು ನಿರಾಕರಿಸುವುದು ಇನ್ನಾದರೂ ನಿಲ್ಲಲಿ. ಉಡುಗೆ ತೊಡುಗೆಗಳ ಸ್ವಾತಂತ್ರ್ಯ, ಸಭ್ಯತೆಯನ್ನು ನಿರ್ಧರಿಸುವ ಅವಕಾಶ ಅವಳಿಗೇ ಇರಲಿ.
-ಪ್ರಿಯದರ್ಶಿನಿ, ಸುಮಾ ಶೇಖರ್, ಕೂಡಿಗೆ, ಸೋಮವಾರಪೇಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.