ಪ್ರತ್ಯೇಕ ಅಕಾಡೆಮಿ ಏಕಿಲ್ಲ?

7

ಪ್ರತ್ಯೇಕ ಅಕಾಡೆಮಿ ಏಕಿಲ್ಲ?

Published:
Updated:

ಬಳ್ಳಾರಿಯಿಂದ ದಕ್ಷಿಣಕ್ಕೆ, ದಕ್ಷಿಣ ಕರ್ನಾಟಕ (ಹಳೇ ಮೈಸೂರು) ಪ್ರಾಂತದಲ್ಲಿ ಚಾಲ್ತಿಯಲ್ಲಿರುವ ‘ಮೂಡಲಪಾಯ’ಕ್ಕೆ ಅದರದೇ ಆದ ವಿಶಿಷ್ಟತೆ ಇದೆ.

ಈ ಕಲಾ ಪ್ರಕಾರಕ್ಕೆ ಭಿನ್ನವಾದ ಸಾಹಿತ್ಯವಿದ್ದು, ವೇಷಭೂಷಣ, ರಂಗಸಂಪ್ರದಾಯ, ಭಾಗವಂತಿಕೆ, ವಾದ್ಯ ಪರಿಕರ... ಹೀಗೆ ಎಲ್ಲ ರೀತಿಯಲ್ಲೂ ಅದರದೇ ಆದ ಸಂಪ್ರದಾಯವನ್ನು ರೂಢಿಸಿಕೊಂಡಿದೆ. ಒಂದು ಕಾಲಕ್ಕೆ ಮಂಡ್ಯ, ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ಕೋಲಾರ, ಚಿತ್ರದುರ್ಗ, ಬಳ್ಳಾರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮೂಡಲಪಾಯ ಪ್ರಸಿದ್ಧಿ ಪಡೆದಿತ್ತು. ವೃತ್ತಿರಂಗಭೂಮಿ ಹಾಗೂ ಚಲನಚಿತ್ರಗಳು ಚಾಲ್ತಿಗೆ ಬಂದ ಮೇಲೆ ಈ ಕಲೆಯು ಪ್ರಖರತೆಯನ್ನು ಕಳೆದುಕೊಂಡಿತು. ಈಗಲೇ ಜಾಗೃತರಾಗಿ ಮೂಡಲಪಾಯವನ್ನು ಪೋಷಿಸದಿದ್ದರೆ ಈ ತಲೆಮಾರಿನಲ್ಲಿಯೇ ಇದು ಕಣ್ಮರೆಯಾಗಿ ಹೋಗುವ ಅಪಾಯವಿದೆ.

ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಯಲಾಟ ಅಕಾಡೆಮಿ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರಂತೆ ದಕ್ಷಿಣ ಕರ್ನಾಟಕದ ಮೂಡಲಪಾಯಕ್ಕೂ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವುದು ಅಗತ್ಯ. ಆದರೆ ಈ ಕಲಾ ಪ್ರಕಾರವನ್ನು ಯಕ್ಷಗಾನ ಅಕಾಡೆಮಿಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇಲ್ಲಿಯೂ ಮೂಡಲಪಾಯಕ್ಕೆ ಕೇವಲ ಒಬ್ಬರೇ ಸದಸ್ಯರನ್ನು ನೇಮಿಸುವ ಮೂಲಕ ಮೂಡಲಪಾಯವನ್ನು ಮೂಲೆಗುಂಪು ಮಾಡಲಾಗಿದೆ.

ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮೂಡಲಪಾಯಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿ, ಅದರ ಬೆಳವಣಿಗೆಗೆ ನೆರವಾಗಬೇಕು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !