ಶನಿವಾರ, ಆಗಸ್ಟ್ 24, 2019
23 °C

ಬೋಧಕೇತರ ಸಿಬ್ಬಂದಿ ಬೇಕಾಗಿದೆ

Published:
Updated:

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವಲ್ಲಿ ಶಿಕ್ಷಕೇತರ ಸಿಬ್ಬಂದಿಯ ಪಾತ್ರದ ಬಗ್ಗೆ ಡಾ. ಎಚ್.ಬಿ.ಚಂದ್ರಶೇಖರ್ ಅವರು ಅಂಕಿ ಅಂಶ ಸಹಿತ ಬೆಳಕು ಚೆಲ್ಲಿದ್ದಾರೆ (ಸಂಗತ, ಜುಲೈ 19). ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರಿಗೆ ಪಾಠ ಬೋಧನೆಗಿಂತ ದಾಖಲೆಗಳ ತಯಾರಿ, ಬಿಸಿಯೂಟ, ಪ್ರೋತ್ಸಾಹದಾಯಕ ಯೋಜನೆಗಳ ಅನುಷ್ಠಾನದಂತಹ ಶೈಕ್ಷಣಿಕವಲ್ಲದ ಹತ್ತು ಹಲವು ಕೆಲಸಗಳಿಗೇ ಬಹುತೇಕ ಸಮಯ ವ್ಯಯವಾಗುತ್ತಿದೆ. ಪ್ರಾಥಮಿಕ ಶಾಲೆಗಳಲ್ಲಂತೂ ಹಿಂದಿನಿಂದಲೂ ಬೋಧಕೇತರ ಸಿಬ್ಬಂದಿಯಿಲ್ಲ. ಆದರೆ ಇತ್ತೀಚೆಗೆ ಸರ್ಕಾರಿ ಪ್ರೌಢಶಾಲೆಗಳಲ್ಲೂ ವರ್ಗಾವಣೆ, ನಿವೃತ್ತಿ, ಮರಣ ಇತ್ಯಾದಿ ಕಾರಣಗಳಿಂದಾಗಿ ತೆರವಾದ ಬೋಧಕೇತರ ಸಿಬ್ಬಂದಿಯ ಹುದ್ದೆ ಭರ್ತಿಯಾಗುತ್ತಿಲ್ಲ. ಹೊಸದಾಗಿ ಪ್ರಾರಂಭಿಸಲಾದ ಕೆಲವು ಪ್ರೌಢಶಾಲೆಗಳಲ್ಲಿ ಈ ಹುದ್ದೆಗಳು ಮಂಜೂರೇ ಆಗಿಲ್ಲ. ಆದ್ದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತಾಗಲು ಬೋಧಕೇತರ ಸಿಬ್ಬಂದಿಯ ನೇಮಕ ಇಂದಿನ ಪ್ರಮುಖ ಆದ್ಯತೆಯಾಗಲಿ.

–ಜಿ.ಆರ್.ಹೆಗಡೆ, ಶಿರಸಿ

Post Comments (+)