ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಹೆಜ್ಜೆಗಳು!

Last Updated 13 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಕರುಣಾನಿಧಿ ಮತ್ತು ಕರ್ನಾಟಕದ ಸಂಬಂಧಗಳನ್ನು ಕುರಿತ ವರದಿ (ಪ್ರ.ವಾ., ಆ. 8) ಓದಿದಾಗ ಕೆಲವು ವಿಚಾರಗಳು ನೆನಪಾದವು.

ಸುದೀರ್ಘ ರಾಜಕೀಯ ಜೀವನದಲ್ಲಿ ಕರುಣಾನಿಧಿ ಅವರು ಕೆಲವು ತಪ್ಪು ಹೆಜ್ಜೆಗಳನ್ನೂ ಇಟ್ಟಿದ್ದರು. ಅವರುಅಧಿಕಾರದಲ್ಲಿದ್ದಾಗ ಎಲ್‌ಟಿಟಿಇಗೆ ಬೆಂಬಲ ಕೊಟ್ಟಿದ್ದರು. ಎಲ್‌ಟಿಟಿಇಯ ಕೆಲವು ನಾಯಕರು ಚೆನ್ನೈನ ಐಷಾರಾಮಿ
ಬಂಗಲೆಗಳಲ್ಲಿದ್ದರಂತೆ. ವಿಧಾನಸಭೆಯಲ್ಲೊಮ್ಮೆ ಜಯಲಲಿತಾ ಅವರನ್ನು ಹೀನಾಯವಾಗಿ ನಡೆಸಿಕೊಂಡದ್ದು ಅವರು ಮಾಡಿದ ಇನ್ನೊಂದು ತಪ್ಪು. ಮೀಸಲಾತಿಯಲ್ಲಿ ಆರ್ಥಿಕವಾಗಿ ಸಶಕ್ತರು (ಕ್ರೀಮಿ ಲೇಯರ್‌) ಎಂಬ ಕಲ್ಪನೆ
ಯನ್ನೇ ತರಬಾರದು ಎಂಬುದು ಅವರ ನಿಲುವಾಗಿತ್ತು.

ದಕ್ಷಿಣದ ರಾಜ್ಯಗಳಲ್ಲಿ ಹಲವು ದಶಕಗಳ ಕಾಲ ತಮಿಳುನಾಡು ದೊಡ್ಡಣ್ಣನಾಗಿತ್ತು. ಇದಕ್ಕೆ ಕಾರಣವೆಂದರೆ, ಇಲ್ಲಿನ ಪ್ರಾದೇಶಿಕ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷಕ್ಕೆ ಬೆಂಬಲ ನೀಡುವ ತಂತ್ರ ಅನುಸರಿಸಿದ್ದು.

ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಮಾತ್ರ, ‘ಕರುಣಾನಿಧಿಯು ಜಯಲಲಿತಾ ಅವರಿಗಿಂತ ಸ್ವಲ್ಪ ವಾಸಿ’ ಎಂಬ ಉತ್ತರವು ರಾಜ್ಯದ ಜನರಿಂದ ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT