ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಇದು ಸಂವಿಧಾನದ ಆಶಯವಲ್ಲ

ಅಕ್ಷರ ಗಾತ್ರ

ಪ್ರತಿದಿನ ಕೂಲಿ ಸಿಕ್ಕಿದರೆ ಸಾಕು, ಅದೇ ಆ ದಿನದ ದೇವರ ಪೂಜೆ. ಕುಡಿಯಲು ಶುದ್ಧನೀರು ಸಿಕ್ಕಿದರೆ, ಅದೇ ಆ ದಿನ ದೇವರು ಕೊಟ್ಟ ತೀರ್ಥ. ಅಂದಿನ ಶ್ರಮದ ಫಲದಿಂದ ಮಾಡುವ ಊಟವೇ ಆ ದಿನದ ದೇವರ ಪ್ರಸಾದ ಅಂದುಕೊಂಡಿರುವ ಶ್ರಮ ಸಂಸ್ಕೃತಿಯ ವರ್ಗ ಒಂದು ಕಡೆ ಇದೆ. ಅಂದಂದಿನ ದುಡಿಮೆಯಿಂದಲೇ ಬದುಕಬೇಕಾದ ಅನಿವಾರ್ಯ ಇಲ್ಲದಿರುವ ವರ್ಗ ಮತ್ತೊಂದು ಕಡೆ ಇದೆ.

ಈ ಎರಡನೆಯ ವರ್ಗದ ಜನರಿಗೆ ಗುಡಿ– ದೇವರು ಮತ್ತು ಅಲ್ಲಿನ ತೀರ್ಥ ಪ್ರಸಾದವೇ ಬಹಳ ಮುಖ್ಯ. ಬಸವಣ್ಣ ಹುಟ್ಟಿದ ಕನ್ನಡ ನಾಡಿನಲ್ಲಿ ಶ್ರಮ ಸಂಸ್ಕೃತಿಗೆ ಮೊದಲ ಆದ್ಯತೆ. ಇದು ಸಂವಿಧಾನದ ಆಶಯವೂ ಹೌದು. ಬಸವತತ್ವ ವನ್ನು ಮರೆತ ನಾವು, ಗುಡಿ ಸಂಸ್ಕೃತಿ ಕಡೆಗೆ ವಾಲುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಸರ್ಕಾರವು ಮಹಿಳೆಯರಿಗೆ ಅರಿಸಿನ–ಕುಂಕುಮ, ಹಸಿರು ಬಳೆ ಕೊಟ್ಟು, ಅವರನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸುವ ಕೆಲಸಕ್ಕೆ ಕೈಹಾಕಿದೆ. ಇದು ಮಹಿಳೆಯರಿಗೆ ಕೊಡುವ ಗೌರವ ಅಲ್ಲ, ಸಂವಿಧಾನದ ಆಶಯವೂ ಇದಲ್ಲ. ಹೊರಗಡೆ ಪುರುಷ ಸಮಾಜದ ಜೊತೆ ಮಹಿಳೆಯರು ಧೈರ್ಯದಿಂದ ಬದುಕಲು ಸಾಧ್ಯವಾಗುವಂಥ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತರಲಿ.

-ತಾ.ಸಿ.ತಿಮ್ಮಯ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT