ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮೊಟ್ಟೆ ತಿನ್ನದವರಿಗೇಕೆ ಮೊಟ್ಟೆ ಉಸಾಬರಿ

ಅಕ್ಷರ ಗಾತ್ರ

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವುದನ್ನು ತೇಜಸ್ವಿನಿ ಅನಂತಕುಮಾರ್ ಪ್ರಶ್ನಿಸಿರುವುದು ವರದಿಯಾಗಿದೆ. ಮೊಟ್ಟೆ ಕಡಿಮೆ ಬೆಲೆಗೆ ಸಿಗುತ್ತದೆ. ಹೆಚ್ಚಿನ ಪೌಷ್ಟಿಕಾಂಶ ಹೊಂದಿದೆ. ಬೆಳೆಯುವ ಮಕ್ಕಳಿಗೆ ಇದು ಅಗತ್ಯ. ಶಾಲೆಗಳಲ್ಲಿಯೂ ಹೆಚ್ಚಿನ ವಿದ್ಯಾರ್ಥಿಗಳು ಮೊಟ್ಟೆಯನ್ನೇ ಆಯ್ಕೆ ಮಾಡಿಕೊಂಡಿರುತ್ತಾರೆ. ಮೊದಲ ದಿನ ಮೊಟ್ಟೆಯನ್ನು ನೀಡಿದಾಗಶಾಲೆಗಳಲ್ಲಿ ಸಡಗರ ಎದ್ದು ಕಾಣುತ್ತಿತ್ತು.

ಸರ್ಕಾರಿ ಶಾಲೆಗಳು ಸಮವಸ್ತ್ರ, ಪಠ್ಯಪುಸ್ತಕ, ಶಿಕ್ಷಕರ ಕೊರತೆ ಹಾಗೂ ಕಟ್ಟಡ ನಿರ್ವಹಣೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳ ಬಗ್ಗೆ ಎಂದೂ ಚಕಾರ ಎತ್ತದ, ತಮ್ಮ ಮಕ್ಕಳು ಅಥವಾ ಬಂಧು– ಮಿತ್ರರ ಮಕ್ಕಳನ್ನೂ ಸರ್ಕಾರಿ ಶಾಲೆಗೆ ದಾಖಲಿಸದ ತೇಜಸ್ವಿನಿ ಅವರು, ಮಕ್ಕಳು ತಿನ್ನುವ ಮೊಟ್ಟೆಯ ಬಗ್ಗೆ ಪ್ರಶ್ನಿಸಿರುವುದು ವಿಷಾದನೀಯ.

ಈ. ಬಸವರಾಜು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT