ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ದೊಡ್ಡಣ್ಣನ ನಡೆ ಸರಿಯೇ?

ಅಕ್ಷರ ಗಾತ್ರ

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಪ್ರಾಬಲ್ಯ ಮೆರೆಯುತ್ತಿರುವಾಗ, ಅದಾಗಲೇ ತನ್ನ ಬಹುಪಾಲು ಸೈನ್ಯವನ್ನು ಅಲ್ಲಿಂದ ವಾಪಸ್‌ ಕರೆಸಿಕೊಂಡಿರುವ ಅಮೆರಿಕವು ಪ್ರೇಕ್ಷಕನಂತೆ ಕೈಕಟ್ಟಿ ಕುಳಿತಿದೆ. ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡಿರುವ ಅಮೆರಿಕವು ತನ್ನ ದೇಶದ ಜನರನ್ನು ಕರೆಸಿಕೊಳ್ಳಲು ಮಾತ್ರ ಅಲ್ಲಿಗೆ ವಿಮಾನ ಕಳುಹಿಸಿದ್ದು ಒಂದು ರೀತಿಯ ಪಲಾಯನವಾದದಂತೆ ಕಾಣುತ್ತಿದೆ. ಸಂಘರ್ಷಪೀಡಿತ ದೇಶದಲ್ಲಿ ಮಾನವ ಹಕ್ಕುಗಳ ರಕ್ಷಣೆಗಾಗಿ ವಿಶ್ವಸಂಸ್ಥೆ ಅಗತ್ಯ ಕ್ರಮ ಕೈಗೊಳ್ಳಬೇಕು.

-ಮಹಾದೇವ ವಿ.,ಕಲಬುರ್ಗಿ

*******

ಮನ-ಮೌನ- ಅನುಮಾನ

ತಾಲಿಬಾನಿ ಅಕ್ರಮಣವ ಸಮರ್ಥಿಸುವ ಮೂಲಕ ಪಾಕಿಸ್ತಾನ ತನಗರಿವಿಲ್ಲದಂತೆ ನೀಡುತ್ತಿದೆಯೇನೋ ದುರಂತಕ್ಕೆ ಆಹ್ವಾನ, ನೆರೆಮನೆಗೆ ಬೆಂಕಿ ಬಿದ್ದರೆ ಚಳಿ ಕಾಯಿಸಿಕೊಳ್ಳುವೆ ಎಂಬಂತಿದೆ ಅದರ ವಿಕೃತ ಮನ. ಈ ಕುರಿತು ದೊಡ್ಡಣನೆನಿಸಿದ ಅಮೆರಿಕದ ಮೌನ ಯಾಕೋ ಮೂಡಿಸುತ್ತಿದೆ ಎಲ್ಲರಲ್ಲೂ ಅನುಮಾನ!

- ಜೆ.ಬಿ. ಮಂಜುನಾಥ, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT