ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ನೀರು ಪೋಲು: ನಿಲ್ಲಲಿ ಅಪಸವ್ಯ

ಅಕ್ಷರ ಗಾತ್ರ

ಜೋಗದಲ್ಲಿ ತಂಗಿದ್ದ ರಾಜ್ಯಪಾಲರನ್ನು ಖುಷಿಪಡಿಸಲಿಕ್ಕಾಗಿ ಲಿಂಗನಮಕ್ಕಿ ಜಲಾಶಯದಿಂದ 800 ಕ್ಯುಸೆಕ್ಸ್‌ ನೀರನ್ನು ಯಾವುದೇ ಮುನ್ಸೂಚನೆ ನೀಡದೆ ಪೋಲು ಮಾಡಿದ ವಿಚಾರ ತಿಳಿದು ಬೇಸರವಾಯಿತು. ಅನ್ನದಾತ ಬೆಳೆದ ಬೆಳೆಗೆ ನೀರು ಸಾಲದೆ ಒಣಗಿದ ಸಂದರ್ಭದಲ್ಲಿ ನೀರು ಕೇಳಿದರೆ ನೂರೆಂಟು ಸಬೂಬು ಹೇಳುವ ಅಧಿಕಾರಿಗಳು, ಈಗ ಒಬ್ಬ ವ್ಯಕ್ತಿಯ ವೈಯಕ್ತಿಕ ಖುಷಿಗಾಗಿ ಇಷ್ಟೊಂದು ಪ್ರಮಾಣದ ನೀರು ಹರಿಸಿರುವುದು ಅಕ್ಷಮ್ಯ.

ನೈಸರ್ಗಿಕ ಸಂಪನ್ಮೂಲಗಳನ್ನು ಸಮಾಜದ ಅವಶ್ಯಕತೆಗಾಗಿ ಮಾತ್ರ ಬಳಸಬೇಕೇ ವಿನಾ ವೈಯಕ್ತಿಕ ಸಂತೋಷಕ್ಕಲ್ಲ. ಅವು ಎಲ್ಲರಿಗೂ ಸೇರಿದವು. ಇನ್ನಾದರೂ ಇಂತಹ ಅಪಸವ್ಯಗಳು ನಿಲ್ಲಲಿ. ಅಂತಹ ಸೌಂದರ್ಯ ಕಣ್ತುಂಬಿಕೊಳ್ಳುವ ಇರಾದೆ ಇದ್ದರೆ ಜಲಾಶಯದಿಂದ ನೀರನ್ನು ಹೊರಬಿಟ್ಟಾಗ ಯಾರು ಬೇಕಾದರೂ ಹೋಗಿ ನೋಡಬಹುದು.

- ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT