ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮಂಕಿಪಾಕ್ಸ್‌: ಮುನ್ನೆಚ್ಚರಿಕೆ ಅಗತ್ಯ

ಅಕ್ಷರ ಗಾತ್ರ

ದೇಶದಲ್ಲಿ ಮಂಕಿಪಾಕ್ಸ್‌ ವೈರಾಣು ಸೋಂಕಿನ ಪ್ರಕರಣಗಳ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಮುನ್ನೆಚ್ಚರಿಕೆ ಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬರೀ ಒಂಬತ್ತೋ ಹತ್ತೋ ಪ್ರಕರಣಗಳು ವರದಿಯಾಗಿವೆ ಎಂದು ಉಪೇಕ್ಷೆ ಮಾಡದೆ ಮುನ್ನೆಚ್ಚರಿಕೆ ವಹಿಸುವುದು ಎಲ್ಲರ ಜವಾಬ್ದಾರಿ. ರೋಗ ಹರಡಲು ಅನುವು ಮಾಡಿಕೊಟ್ಟು ಬಳಿಕ ಪರಿತಪಿಸುವುದಕ್ಕಿಂತ ಹರಡುವಿಕೆಯನ್ನೇ ತಡೆಯುವುದು ಜಾಣ್ಮೆಯ ನಡೆ. ರೋಗ ಹರಡುವಿಕೆ ತಡೆಯಲು ನಾಗರಿಕರ ಸಹಕಾರ ಮುಖ್ಯ. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಎಲ್ಲರೂ ಗಮನಹರಿಸಬೇಕು.

-ವಿಜಯಲಕ್ಷ್ಮಿ ಉಪ್ಪಾರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT