ಸೋಮವಾರ, ಫೆಬ್ರವರಿ 17, 2020
30 °C

ದ್ವಿಮುಖ ನೀತಿ ಏಕೆ?

ಪಿ.ಜೆ. ರಾಘವೇಂದ್ರ. ಮೈಸೂರು Updated:

ಅಕ್ಷರ ಗಾತ್ರ : | |

ಮೋಟಾರು ವಾಹನಗಳ ನೋಂದಣಿ ಸಂಖ್ಯಾ ಫಲಕ ಸ್ಪಷ್ಟವಾಗಿರಬೇಕು ಎಂಬುದು ನಿಯಮ. ಸಂಖ್ಯೆಗಳು ಸ್ಪಷ್ಟವಾಗಿಲ್ಲದಿದ್ದರೆ ಅಥವಾ ಫಲಕದ ಮೇಲೆ ಬೇರೆ ಏನನ್ನಾದರೂ ಬರೆದಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ್ದು ಕಡ್ಡಾಯ. ಆದರೆ ಪೊಲೀಸರು, ಆರ್‌ಟಿಒ ಅಧಿಕಾರಿಗಳು ಈ ನಿಟ್ಟಿನಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ.

ಇಲಾಖೆಗೆ ಹೆಚ್ಚುವರಿ ಶುಲ್ಕ ಕೊಟ್ಟು ‘8055’ ಎಂಬ ನೋಂದಣಿ ಸಂಖ್ಯೆಯನ್ನು ಪಡೆಯುವ ಕೆಲವು ಧನವಂತರು, ಆ ಸಂಖ್ಯೆಯನ್ನು ಇಂಗ್ಲಿಷ್‌ನ BOSS ಎಂದು ಕಾಣುವ ರೀತಿಯಲ್ಲಿ ಬರೆಯುತ್ತಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಅಧಿಕಾರಿಗಳಿಗೆ ಇಲ್ಲವೇ?

ಹೆಲ್ಮೆಟ್ ಧರಿಸದೆ ದ್ವಿಚಕ್ರವಾಹನ ಓಡಿಸುವ ಗಾರೆ ಕೆಲಸಗಾರರು, ಕೂಲಿ ಕಾರ್ಮಿಕರ ವಿರುದ್ಧ ಸಮರ ಸಾರಿ ದಂಡ ವಸೂಲಿ ಮಾಡುವ ಪೊಲೀಸರ ಕಣ್ಣಿಗೆ ಇಂಥ ಉಲ್ಲಂಘನೆಗಳೇಕೆ ಕಾಣಿಸುತ್ತಿಲ್ಲ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)