ವಾಚಕರ ವಾಣಿ | ನಿವೃತ್ತಿ ನಂತರವೂ ಮುಂದುವರಿಕೆ ಸಲ್ಲದು
ನಿವೃತ್ತ ಅಧಿಕಾರಿಗಳು ಲಾಬಿ ನಡೆಸಿ, ಸರ್ಕಾರಿ ಸ್ವಾಮ್ಯದ ಹಲವಾರು ನಿಗಮ, ಮಂಡಳಿಗಳ ಬಹುತೇಕ ಉನ್ನತ ಹುದ್ದೆಗಳಿಗೆ ಮತ್ತೆ ಮತ್ತೆ ಬಂದು ಕೂರುತ್ತಿದ್ದಾರೆ. ಇಂತಹವರಿಂದಾಗಿ ಎಷ್ಟೋ ವಿದ್ಯಾವಂತರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಸರ್ಕಾರ ಈ ನಿವೃತ್ತ ಉದ್ಯೋಗಿಗಳನ್ನು ಮತ್ತೆ ಮತ್ತೆ ಕೆಲಸದಲ್ಲಿ ಮುಂದುವರಿಸುವ ಬದಲು, ವಿದ್ಯಾವಂತ ಯುವಜನರಿಗೆ ಉದ್ಯೋಗ ನೀಡಬಾರದೇ?
ಈ ಹಿರಿಯರೇನೂ ಪುಕ್ಕಟೆಯಾಗಿ ಕೆಲಸ ಮಾಡುವುದಿಲ್ಲ. ಸರ್ಕಾರ ಕೊಡುವ ಸಂಬಳ, ಕಾರು, ಭತ್ಯೆಯಂತಹ ಸವಲತ್ತುಗಳನ್ನು ಇವರೂ ಪಡೆದುಕೊಳ್ಳುತ್ತಾರೆ. ಹಾಗಿದ್ದಮೇಲೆ ನಿರುದ್ಯೋಗಿಗಳನ್ನು ನೇಮಿಸುವುದರಿಂದ ಸರ್ಕಾರಕ್ಕೆ ಹೊರೆ ಹೇಗಾಗುತ್ತದೆ?
-ಮಂಜುನಾಥ ಉಮೇಶ ನಾಯ್ಕ, ಮುರ್ಡೇಶ್ವರ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.