ಸೋಮವಾರ, ಜನವರಿ 25, 2021
25 °C

ತೈಲ ಬೆಲೆ ಏರಿಕೆ: ಪ್ರತಿಕ್ರಿಯೆಯೇ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೈಲದ ಬೆಲೆ ಗಗನಕ್ಕೇರುತ್ತಿದೆ. ವಿಶೇಷವೆಂದರೆ, ಈ ಏರಿಕೆ ಬಗೆಗೆ ಜನಸಾಮಾನ್ಯರು ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಬರೀ ಕಂಠಶೋಷಣೆ ಎಂದು ಸುಮ್ಮನಿದ್ದಿರಬಹುದು. ರಾಜಕಾರಣಿಗಳ ಪೈಕಿ ಡಾ. ಸುಬ್ರಮಣಿಯನ್‌ ಸ್ವಾಮಿ ಒಬ್ಬರನ್ನು ಬಿಟ್ಟರೆ ಬಹುಶಃ ಬೇರೆ ಯಾರೂ ಪ್ರತಿಕ್ರಿಯಿಸಿಲ್ಲ.

ಹಿಂದೆ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರ ಇದ್ದಾಗ, ತೈಲದ ಬೆಲೆ ಏರಿದಾಗಲೆಲ್ಲಾ ಗಲ್ಲಿ ಗಲ್ಲಿಯಲ್ಲಿ, ವೃತ್ತದಲ್ಲಿ ಪ್ರತಿಭಟನೆ ಮಾಡುತ್ತಿದ್ದವರು ಈಗ ಜಾಣಮೌನ ವಹಿಸಿದ್ದಾರೆ. ಜನ ಮೌನವಾಗಿ ಶಪಿಸುತ್ತಾ ಏರಿಕೆಗೆ ಹೊಂದಿಕೊಳ್ಳುತ್ತಿದ್ದಾರೆ. ಪತ್ರಿಕಾ ಮಾಧ್ಯಮದವರು ಈ ಸುದ್ದಿಯನ್ನು ಒಳಪುಟಕ್ಕೆ ಸರಿಸುತ್ತಿದ್ದಾರೆ!

–ರಮಾನಂದ ಶರ್ಮಾ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು