ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣಾಮಕಾರಿ ಮನಃಪರಿವರ್ತನೆ

Last Updated 7 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳು ತಮ್ಮ ಅನುಭವಗಳನ್ನು ಕವನಗಳ ಮೂಲಕ ಹೊರಹಾಕಿದ್ದು, ಕಾರಾಗೃಹದ ಅಧಿಕಾರಿಗಳು ಅವುಗಳಿಗೆ ಸಂಕಲನದ ರೂಪ ನೀಡಿದ್ದಾರೆ (ಪ್ರ.ವಾ., ಏ. 7). ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಿ ಭಾವನೆ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿರುವುದು ಪರಿಣಾಮಕಾರಿಯಾದ ಮನಃ ಪರಿವರ್ತನೆ ಹಾಗೂ ಮೆಚ್ಚುವಂತಹ ಸಂಗತಿ.

ಇದೇ ಮಾದರಿಯಲ್ಲಿ ಇತರ ಕಾರಾಗೃಹಗಳಲ್ಲೂ ಕಲಿಕೆಗೆ ಮಹತ್ವ ಸಿಗುವಂತೆ ಆಗಬೇಕು. ಕಲಿಕೆ ಎಂಬುದು ಮನುಷ್ಯರನ್ನು ಬದಲಾಯಿಸುವುದರಲ್ಲಿ ಎಷ್ಟು ಮುಖ್ಯ ಪಾತ್ರ ವಹಿಸುತ್ತದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ.

ಅಕ್ಷರ ಕಲಿಕೆಯಿಂದ ಕವಿಗಳಾಗಿರುವ ಕೈದಿಗಳು ಬಿಡುಗಡೆಯಾದ ಬಳಿಕ ಸಮಾಜದ ಏಳಿಗೆಗೆ ಮುಂದಾಗಲಿ. ಇವರು ಬರೆದ ಕವನಗಳು ಮನಸ್ಸುಗಳನ್ನು ಬದಲಿಸಲಿ.

-ಕೀರ್ತನ ನಾಗರಾಜ್, ಚಟ್ನಳ್ಳಿ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT