‘ಫಾರ್ವರ್ಡ್‌’ಗೆ ಧಾವಂತ

7

‘ಫಾರ್ವರ್ಡ್‌’ಗೆ ಧಾವಂತ

Published:
Updated:

ಜನ ಗುಂಪು ಸೇರಿ, ಯಾವುದೋ ಆಪಾದನೆ ಹೊರಿಸಿ ಯಾರನ್ನಾದರೂ ಸಾರ್ವಜನಿಕವಾಗಿ ಬಡಿದು ಕೊಲ್ಲುವುದು ದೇಶದಲ್ಲಿ ಹೊಸ ಸಾಮಾಜಿಕ ಮನರಂಜನೆಯಾಗುತ್ತಿದೆ ಎಂದು ನಾರಾಯಣ ಎ. ಅವರು ‘ಸಾಯ ಹೊಡೆಯುವ ಸಾಮೂಹಿಕ ಮನರಂಜನೆ’ ಲೇಖನದಲ್ಲಿ ಮನ ಮುಟ್ಟುವಂತೆ ಬರೆದಿದ್ದಾರೆ. ಈ ಘಟನೆಗಳಿಗೆ ಸಂಬಂಧಿಸಿದಂತೆ ಮುಖ್ಯ ಸಂಗತಿಯೊಂದನ್ನು ಹೇಳಲು ಅವರು ಮರೆತಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ಗಳ ಮೂಲಕ ಸುಳ್ಳು, ವದಂತಿಗಳು ಬಹುಬೇಗ ಹಬ್ಬುತ್ತಿವೆ. ತಮ್ಮ ಮೊಬೈಲ್‌ಗಳಿಗೆ ಬರುವ ಇಂಥ ಸಂದೇಶಗಳ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವ ಗೊಡವೆಗೂ ಹೋಗದೆ ಜನರು ಅವುಗಳನ್ನು ಫಾರ್ವರ್ಡ್ ಮಾಡುತ್ತ ಹೋಗುತ್ತಿರುವುದೂ ಈ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ.

ತಮ್ಮ ಮೊಬೈಲ್‌ಗೆ ಇಂಥ ಸಂದೇಶ ಬಂದಾಗ ಅದನ್ನು ಫಾರ್ವರ್ಡ್‌ ಮಾಡಲು ಧಾವಂತ ತೋರದೆ, ಅಗತ್ಯವೆನಿಸಿದರೆ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ತಲುಪಿಸುವ ಪ್ರಬುದ್ಧತೆಯನ್ನು ಜನರು ತೋರಬೇಕು.

-ಆನಂದ ರಾಮತೀರ್ಥ, ಜಮಖಂಡಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !