ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: ನೆನಪಿನಲ್ಲಿ ಇರಬೇಕಾದ ಪಾಠ

Last Updated 12 ಜುಲೈ 2022, 17:58 IST
ಅಕ್ಷರ ಗಾತ್ರ

ಶ್ರೀಲಂಕಾ ಬೇರೆ ಬೇರೆ ನೆಲೆಯಲ್ಲಿ ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದು ಅರಾಜಕತೆಯತ್ತ ಸಾಗುತ್ತಿದೆ. ಮಿತಿಮೀರಿದ ವಿದೇಶಿ ಸಾಲ, ಭ್ರಷ್ಟಾಚಾರ, ಸ್ವಜನಪಕ್ಷಪಾತದಿಂದಾಗಿ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ, ಬೆಲೆ ಗಗನಕ್ಕೇರಿದೆ. ಇದರಿಂದ ತತ್ತರಿಸಿರುವ ಜನಸಾಮಾನ್ಯರು ಬೀದಿಗಿಳಿದಿದ್ದಾರೆ. ಈ ಸಂದರ್ಭದಲ್ಲಿ ದ್ವೀಪರಾಷ್ಟ್ರಕ್ಕೆ ಎಲ್ಲ ದೇಶಗಳ ಸಹಕಾರದ ಅಗತ್ಯವಿದೆ. ಭಾರತವು ಶ್ರೀಲಂಕಾಕ್ಕೆ ಸೈನ್ಯದ ನೆರವು ನೀಡುವುದಕ್ಕೆ ಸಂಬಂಧಿಸಿದ ವರದಿಗಳನ್ನು ಅಲ್ಲಿನ ಭಾರತೀಯ ಹೈಕಮಿಷನ್ ಅಲ್ಲಗಳೆದಿದೆ. ಅದೇನೇ ಇರಲಿ, ಯಾವುದೇ ಕಾರಣಕ್ಕೂ ಭಾರತವು ಶ್ರೀಲಂಕಾಕ್ಕೆ ಸೈನ್ಯವನ್ನು ಕಳುಹಿಸಬಾರದು.

ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಶ್ರೀಲಂಕಾದ ತಮಿಳರು ಮತ್ತು ಅಲ್ಲಿನ ಸರ್ಕಾರದ ನಡುವೆ ಘರ್ಷಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತವು ಶಾಂತಿಪಡೆಯ ಹೆಸರಿನಲ್ಲಿ ಸೈನ್ಯವನ್ನು ಕಳುಹಿಸಿತ್ತು. ದಿನಗಳೆದಂತೆ ಭಾರತೀಯ ಸೈನ್ಯ ಮತ್ತು ತಮಿಳು ಸಂಘಟನೆಗಳ ನಡುವೆ ಘರ್ಷಣೆ ಪ್ರಾರಂಭವಾಗಿ ಎರಡೂ ಕಡೆ ಸಾವುನೋವುಗಳಾಗಿ, ಅದು ರಾಜೀವ್‌ ಗಾಂಧಿ ಅವರ ಹತ್ಯೆಗೆ ಕಾರಣವಾದದ್ದು ಈಗ ಇತಿಹಾಸ. ಈ ಇತಿಹಾಸ ನಮಗೆ ಎಂದೆಂದೂ ನೆನಪಿನಲ್ಲಿ ಇರಬೇಕಾದ ಪಾಠ.

⇒ಈ. ಬಸವರಾಜು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT