ಶುಕ್ರವಾರ, ಅಕ್ಟೋಬರ್ 2, 2020
24 °C

ವಾಚಕರ ವಾಣಿ | ಮಕ್ಕಳ ಮನಃಸ್ಥಿತಿ ಅರಿಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಇನ್ನೇನು ಹೊರಬೀಳಲಿದೆ. ಚೆನ್ನಾಗಿ ಪರೀಕ್ಷೆ ಬರೆದಿದ್ದವರಿಗೆ ತಾವೆಷ್ಟು ಅಂಕ ಪಡೆಯಬಹುದು ಎಂಬ ಕುತೂಹಲ ಇರುತ್ತದೆ. ಯಾವುದೋ ಕಾರಣದಿಂದ ಪರೀಕ್ಷೆಯನ್ನು ಚೆನ್ನಾಗಿ ಬರೆಯದ ಮಕ್ಕಳಲ್ಲಿ ಸಹಜವಾಗಿಯೇ ಆತಂಕ ಇರುತ್ತದೆ. ಆ ಆತಂಕ ನಿವಾರಿಸಲು ಮನೆಯವರು ಮುತುವರ್ಜಿ ವಹಿಸಬೇಕು.

ಮಾಧ್ಯಮಗಳು ಉತ್ತಮ ಫಲಿತಾಂಶ ಪಡೆದ ಮಕ್ಕಳನ್ನು ವೈಭವೀಕರಿಸುತ್ತವೆ. ಪೋಷಕರಂತೂ ತಮ್ಮ ಮಕ್ಕಳನ್ನು ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡಿ ಪರಾಮರ್ಶಿಸುತ್ತಾರೆ. ಇದರಿಂದ ಇಂತಹ ಕೆಲವು ಮಕ್ಕಳು ಹತಾಶ ಸ್ಥಿತಿಗೆ ತಲುಪುವುದೂ ಇದೆ. ಉತ್ತಮ ಫಲಿತಾಂಶ ಪಡೆದ ಮಕ್ಕಳನ್ನು ಪ್ರಶಂಸಿಸಬೇಕು ಸರಿ. ಆದರೆ, ಕಡಿಮೆ ಅಂಕ ಪಡೆದ ಮಕ್ಕಳ ಮನಃಸ್ಥಿತಿಯನ್ನೂ ನಾವು ಅರಿಯಬೇಕಾಗುತ್ತದೆ. ಮುಂದೆಯೂ ಅವಕಾಶಗಳು ಇದ್ದೇ ಇರುತ್ತವೆ ಎಂಬ ವಾಸ್ತವವನ್ನು ಅವರಿಗೆ ಮನದಟ್ಟು ಮಾಡಿಸಬೇಕಾದುದು ಅತ್ಯಗತ್ಯ.

-ಎಚ್.ಚಂದ್ರಪ್ಪ ನೀಲಗುಂದ, ದೊಗ್ಗಳ್ಳಿ, ಹರಿಹರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು