ಶುಕ್ರವಾರ, ಮೇ 27, 2022
21 °C

ಗೊಂದಲರಹಿತ ವಿಜ್ಞಾನ ಪ್ರಶ್ನೆ ಪತ್ರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್ಎಸ್ಎಲ್‌ಸಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಸೋಮವಾರ (ಏ. 11) ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆ ನಿಜಕ್ಕೂ ವಿದ್ಯಾರ್ಥಿಗಳ ದೃಷ್ಟಿಯಿಂದ ಅತ್ಯಂತ ಸುಲಭ ಹಾಗೂ ಸರಳ ಎನಿಸುವಂತಿತ್ತು.

ಹಿಂದಿನ ವರ್ಷದ ಪರೀಕ್ಷೆಗಳಲ್ಲಿ, ಬೇರೆ ವಿಷಯಗಳ ಪ್ರಶ್ನೆಪತ್ರಿಕೆಗಳಿಗೂ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆಗೂ ಅಜಗಜಾಂತರ ವ್ಯತ್ಯಾಸ ಇರುತ್ತಿತ್ತು. ವಿಜ್ಞಾನ ವಿಷಯದಲ್ಲಿ ಗೊಂದಲಕಾರಿ ಪ್ರಶ್ನೆಗಳು ಇರುತ್ತಿದ್ದುದರಿಂದ, ಉತ್ತರಿಸಲಾರದೆ ವಿದ್ಯಾರ್ಥಿಗಳು ಆತಂಕಕ್ಕೊಳಗಾದ ಉದಾಹರಣೆಗಳಿದ್ದವು. ಇದರಿಂದ ಹೆಚ್ಚು ಅಂಕಗಳನ್ನು ಪಡೆಯಲು ಅವರಿಗೆ ಕಷ್ಟವಾಗುತ್ತಿತ್ತು. ಆದರೆ, ಈ ವರ್ಷದ ಪ್ರಶ್ನೆಪತ್ರಿಕೆಯು ಗೊಂದಲರಹಿತವಾಗಿದ್ದು, ಭೌತ, ರಸಾಯನ ಹಾಗೂ ಜೀವಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಸಮತೋಲಿತವಾಗಿತ್ತು. ಪ್ರಶ್ನೆಪತ್ರಿಕೆ ಈ ರೀತಿ ಇದ್ದರೆ, ವಿಜ್ಞಾನ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚು ಆಸಕ್ತಿ ಮೂಡುವುದರಲ್ಲಿ ಸಂಶಯವೇ ಇಲ್ಲ.

–ಎಚ್.ಎಸ್.ಟಿ.ಸ್ವಾಮಿ, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು