ಮಂಗಳವಾರ, ಆಗಸ್ಟ್ 20, 2019
22 °C

ಪ್ರಶಸ್ತಿಯ ಅಪಮೌಲ್ಯ ದುರದೃಷ್ಟಕರ

Published:
Updated:

ಹಣ ಮಾಡುವ ದಂಧೆಗಳು ಅನೇಕ. ಗೌರವ ಡಾಕ್ಟರೇಟ್ ಕೊಡುವುದು ಮತ್ತು ಕೆಲವು ಸಂಘ ಸಂಸ್ಥೆಗಳು ನೀಡುತ್ತಿರುವ ಪ್ರಶಸ್ತಿಗಳೂ ಅವುಗಳಲ್ಲಿ ಸೇರಿರುವುದು ದುರದೃಷ್ಟಕರ.

ಪ್ರಶಸ್ತಿಗಳನ್ನು ಸಾಮಾಜಿಕವಾಗಿ, ಸಾಹಿತ್ಯಿಕವಾಗಿ ಹೀಗೆ ಅಪಮೌಲ್ಯಗೊಳಿಸುವ ಕೆಲಸಕ್ಕೆ ತಡೆ ಹಾಕುವುದು ಅನಿವಾರ್ಯ. ಸರ್ಕಾರ ಕೊಡಮಾಡುವ ಪ್ರಶಸ್ತಿಗಳು ಎಲ್ಲರಿಗೂ ದೊರಕುವುದಿಲ್ಲ. ಹೀಗಾಗಿ ಸ೦ಘ ಸಂಸ್ಥೆಗಳಾದರೂ ಅಂತಹವರನ್ನು ಗುರುತಿಸಿದರೆ ಒಳ್ಳೆಯದು. ಆದರೆ, ಕೆಲವರು ಇದನ್ನೇ ದಂಧೆಯಾಗಿ ಮಾಡಿಕೊಳ್ಳುತ್ತಿರುವುದು ಅಕ್ಷಮ್ಯ. ಈ ಹಾವಳಿ ಇನ್ನೂ ವಿಪರೀತಕ್ಕೆ ಹೋಗುವುದನ್ನು ತಪ್ಪಿಸಲು ತುರ್ತು ಕ್ರಮ ಅಗತ್ಯ.

ಬಾ.ಹ.ರಮಾ ಕುಮಾರಿ, ತುಮಕೂರು

Post Comments (+)