ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ‘ಪುಳಿಯೋಗರೆ’ ಸರದಿ...

Last Updated 20 ಜನವರಿ 2020, 19:33 IST
ಅಕ್ಷರ ಗಾತ್ರ

‘ಪುಳಿಯೋಗರೆ’ ಎಂಬ ಪದವನ್ನು ಸರಿಯಾಗಿ ಉಚ್ಚರಿಸದ ವಿದ್ಯಾರ್ಥಿನಿಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದ ಸಕಲೇಶಪುರ ತಾಲ್ಲೂಕಿನ ಶಿಕ್ಷಕರೊಬ್ಬರನ್ನು ಅಮಾನತು ಮಾಡಿರುವ ಸುದ್ದಿ ಓದಿ (ಪ್ರ.ವಾ., ಜ. 18) ಬೇಸರವಾಯಿತು.

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯು ‘ಪಕ್ಕೆಲುಬು’ ಪದವನ್ನು ಉಚ್ಚರಿಸಲು ತಡವರಿಸುವುದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಹೂವಿನಹಡಗಲಿ ತಾಲ್ಲೂಕಿನ ಶಿಕ್ಷಕರೊಬ್ಬರು ಅಮಾನತಾಗಿರುವುದು ಗೊತ್ತಿದ್ದೂ ‘ಪುಳಿಯೋಗರೆ’ ವಿದ್ಯಮಾನ ನಡೆದಿದೆ!

ಹಾಗಾದರೆ, ಕನ್ನಡ ಪದಗಳ ಉಚ್ಚಾರಣೆ ಅಷ್ಟೊಂದು ಕಷ್ಟವೇ? ಹಿಂದೆ ನಾವೆಲ್ಲ ಕಲಿಯುವಾಗ ಕಾಗುಣಿತವನ್ನು ತಲೆಕಟ್ಟು, ಕೊಂಬು ಎಂದೆಲ್ಲ ವಿವರಿಸಿ ಕಲಿಸಲಾಗುತ್ತಿತ್ತು. ಈಗ ಬಹುತೇಕರು ಕ ಕಾ ಕಿ ಕೀ... ಎಂದಷ್ಟೇ ಹೇಳಿಕೊಡುತ್ತಿರುವುದರಿಂದ ಕೈ ಮೈ ಪರಚಿಕೊಂಡರೂ ಮಕ್ಕಳಿಗೆ ಪದಗಳ ಉಚ್ಚಾರಣೆ ಸ್ಪಷ್ಟವಾಗಿ ಬರುತ್ತಿಲ್ಲ. ಹೀಗಾಗಿ ಶಿಕ್ಷಕರು ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ.

–ಅ.ಮೃತ್ಯುಂಜಯ,ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT