ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ: ವಿನಾಯಿತಿ ಇರಲಿ

Last Updated 25 ಸೆಪ್ಟೆಂಬರ್ 2019, 18:22 IST
ಅಕ್ಷರ ಗಾತ್ರ

ಮಧ್ಯ ವಯಸ್ಸು ದಾಟಿದವರಿಗೆ ತಂತ್ರಜ್ಞಾನ ರೂಢಿಸಿಕೊಳ್ಳುವುದು ಕಷ್ಟ ಎಂಬುದು ಹೆಚ್ಚಿನವರ ಅನುಭವ. ಹೀಗಾಗಿ, ನಾಲ್ಕೈದು ವರ್ಷಗಳ ಹಿಂದೆ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯ ಮಾಡಿದಾಗ, ಐವತ್ತು ವರ್ಷ ಮೀರಿದವರಿಗೆ ವಿನಾಯಿತಿ ನೀಡಲಾಗಿತ್ತು. ಆದರೆ, ಕಳೆದ ವರ್ಷದಿಂದ ಪ್ರೌಢಶಾಲಾ ಶಿಕ್ಷಕರಿಗೆ ಮತ್ತು ಈ ವರ್ಷದಿಂದ ಪಿಯು ಉಪನ್ಯಾಸಕರಿಗೆ ನೀಡಲಾಗುತ್ತಿರುವ ಟಾಲ್ಪ್ (ತಂತ್ರಜ್ಞಾನ ಆಧಾರಿತ ಕಲಿಕಾ ಯೋಜನೆ) ತರಬೇತಿಗೆ ಐವತ್ತೈದು ವರ್ಷ ಮೀರಿದವರೂ ಕಡ್ಡಾಯವಾಗಿ ಹಾಜರಾಗಲು ಶಿಕ್ಷಣ ಇಲಾಖೆ ಆದೇಶಿಸಿದೆ.

ಹತ್ತು ದಿನಗಳ ಕಾಲ ಇಡೀ ದಿನ ಕಂಪ್ಯೂಟರ್ ಪರದೆಯನ್ನು ವೀಕ್ಷಿಸಲು ಕಣ್ಣಿಗೆ ಶ್ರಮವಾಗುವುದಲ್ಲದೆ ಅಲ್ಲಿ ನೀಡುವ ಅಸೈನ್‌ಮೆಂಟ್‌ಗಳನ್ನು ಪೂರೈಸಲಾಗದೆ ಒದ್ದಾಡುವಂತಾಗಿದೆ. ಅಲ್ಲದೆ ಆ ಜ್ಞಾನವನ್ನು ತರಗತಿ
ಗಳಲ್ಲಿ ಬಳಸುವ ಸಾಧ್ಯತೆಯೂ ಇಲ್ಲ. ಏಕೆಂದರೆ, ಸರ್ಕಾರ ಅದಕ್ಕೆ ಬೇಕಾದ ಎಲೆಕ್ಟ್ರಾನಿಕ್ ಸಲಕರಣೆಗಳನ್ನು
ಪೂರೈಸಿ ಜಾರಿಗೆ ತರಲು ನಾಲ್ಕೈದು ವರ್ಷಗಳಾದರೂ ಆಗಬಹುದು. ಹೀಗೆ ಎಲ್ಲ ವಿಧದಲ್ಲೂ ಸರ್ಕಾರ ಮಾಡುವ ವೆಚ್ಚ ವ್ಯರ್ಥವಾಗುತ್ತದೆ. ಆದ್ದರಿಂದ 50– 55 ವರ್ಷ ಮೀರಿದವರಿಗೆ ಟಾಲ್ಪ್ ತರಬೇತಿಯಿಂದ ವಿನಾಯಿತಿ ನೀಡಬೇಕು.

ಜೆ.ಜಿ.ಉಪಾಧ್ಯಾಯ, ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT