ಗುರುವಾರ , ಸೆಪ್ಟೆಂಬರ್ 23, 2021
25 °C

ಹೃದಯಹೀನರಿಗೆ ತಕ್ಕಶಾಸ್ತಿ ಆಗಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ ತಾಲ್ಲೂಕಿನ ಕಂದಾಳ್‌– ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೆರೆಹಿಡಿದ ನೂರಾರು ನಾಯಿಗಳನ್ನು ಅರಣ್ಯದಲ್ಲಿ ಸಜೀವ ಸಮಾಧಿ ಮಾಡಿರುವ ಸುದ್ದಿ (ಪ್ರ.ವಾ., ಸೆ. 9) ಓದಿ ಬಹಳ ಬೇಸರವಾಯಿತು. ಈಗ್ಗೆ ಎರಡು ದಿನಗಳ ಹಿಂದೆ ನನ್ನ ಕಾಲಿಗೆ ನಾಯಿ ಕಡಿದು ಚುಚ್ಚುಮದ್ದು ಪಡೆಯುತ್ತಿರುವ ನನಗೇ ಈ ವಿಷಯ ತಿಳಿದು ಹೇಳಲಸದಳವಾದ ವ್ಯಥೆ ಆಗಿದೆ. ಪಾಪ, ಮೂಕಪ್ರಾಣಿಗಳು ಅರಿಯದೆ ಮಾಡಿದ ತಪ್ಪಿಗೆ ಅವುಗಳನ್ನು ಹೀಗೆ ಕೊಂದು ಹಾಕುವುದು ಸರಿಯಲ್ಲ.

ನಾಯಿಗಳನ್ನು ಹಿಡಿದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸುವುದು ಬಿಟ್ಟು ಜೀವಂತ ಸಮಾಧಿ ಮಾಡಲು ಆ ಪ್ರಾಣಿ ಹಂತಕರಿಗೆ ಮನಸ್ಸಾದರೂ ಹೇಗೆ ಬಂತು? ಅಂತಹ ಹೃದಯಹೀನರಿಗೆ ತಕ್ಕಶಾಸ್ತಿಯೇ ಆಗಬೇಕು ಹಾಗೂ ಅಂತಹ ಕಿರಾತಕರಿಗೆ ಸಾಧ್ಯವಾದಷ್ಟೂ ಒಳ್ಳೆಯ ಅರಿವು ಉಂಟುಮಾಡಿಸಲು ಪ್ರಯತ್ನಿಸಬೇಕು.

ಬಾಲಕೃಷ್ಣ ಎಂ.ಆರ್., ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.