ಶುಕ್ರವಾರ, ಡಿಸೆಂಬರ್ 6, 2019
19 °C

ಶಾಲೆಯಿಂದ ಹೊರಗುಳಿದ ಆ ಮಕ್ಕಳಿಗಾಗಿ ಮಿಡಿಯೋಣ

Published:
Updated:

ರಾಜ್ಯದಾದ್ಯಂತ 70,116 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ (ಪ್ರ.ವಾ., ಜೂನ್‌ 18). ಇದೇ ವಿಚಾರದ ಬಗ್ಗೆ ಇತರ ರಾಜ್ಯಗಳಿಂದ ಮಾಹಿತಿ ಪಡೆದರೆ, ದೇಶದಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ವಂಚಿತರಾಗಿರುವುದು ತಿಳಿದುಬರುತ್ತದೆ. ಒಮ್ಮೆ ಶಾಲೆಗೆ ಸೇರುವ ಈ ಮಕ್ಕಳು ಮುಂದಿನ ಶೈಕ್ಷಣಿಕ ವರ್ಷದ ಹೊತ್ತಿಗೆ ಎಲ್ಲಿ ಕಾಣೆಯಾಗುತ್ತಾರೆ? ಖಾಸಗಿ ಶಾಲೆಗೆ ಸೇರಿರುತ್ತಾರೆಯೋ? ದುಡಿಮೆಗೆ ಹಚ್ಚಲಾಗಿರುತ್ತದೆಯೋ?  ಬಾಲ್ಯವಿವಾಹಕ್ಕೆ ಅವರನ್ನು ದೂಡಲಾಗಿದೆಯೋ ಎಂಬುದು ಹೊರಜಗತ್ತಿಗೆ ತಿಳಿಯುವುದೇ ಇಲ್ಲ.

ಮಕ್ಕಳಿಗೆ ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ.ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಪುಸ್ತಕ, ಸೈಕಲ್, ನಲಿ–ಕಲಿ ರೀತಿಯ ಶಿಕ್ಷಣ... ಹೀಗೆ ಎಷ್ಟೆಲ್ಲಾ ಆಕರ್ಷಣೆ, ಸವಲತ್ತುಗಳನ್ನು ನೀಡಿದರೂ ಮಕ್ಕಳೇಕೆ ಶಾಲೆಗಳಿಂದ ವಿಮುಖರಾಗುತ್ತಿದ್ದಾರೆ? ಕನಿಷ್ಠ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನಾದರೂ ಶಿಸ್ತುಬದ್ಧವಾಗಿ ಕಲಿಯದಿದ್ದರೆ ಆ ಮಕ್ಕಳು ಭವಿಷ್ಯವನ್ನು ಆತ್ಮವಿಶ್ವಾಸದಿಂದ ಕಳೆಯಲು ಸಾಧ್ಯವೇ? ಸರ್ಕಾರ ಮತ್ತು ಸಮಾಜ ಈ ವಿಚಾರದ ಬಗ್ಗೆ ಗಂಭೀರವಾಗಿ ಚಿಂತಿಸಬೇಕು.

–ವಸುಂಧರಾ ಕೆ.ಎಂ., ಬೆಂಗಳೂರು 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು