ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ ವಿರುದ್ಧ ತಿರುಗಿ ಬೀಳಲು ನಾನಾ ಕಾರಣಗಳು

Last Updated 30 ಮೇ 2021, 16:34 IST
ಅಕ್ಷರ ಗಾತ್ರ

ಕೇಂದ್ರ ಸರಕಾರ ಟ್ವಿಟರ್ ಜೊತೆ ಜಟಾಪಟಿಗೆ ಇಳಿದಿರುವದನ್ನು ಗಮನಿಸಿದಾಗ ದೇಶ ಎಂತಹುದೇ ಸಂಕಷ್ಟದಲ್ಲಿರಲಿ ಸರಕಾರಕ್ಕೆ ಅದರ ಪ್ರತಿಷ್ಠೆಯೇ ಮೊದಲ ಆಧ್ಯತೆ ಎಂಬುದು ಸ್ಪಷ್ಟವಾಗುತ್ತದೆ. ಸಾಮಾಜಿಕ ಮಾಧ್ಯಮಗಳಿಂದಲೇ ಪ್ರಚಾರ ಗಿಟ್ಟಿಸಿಕೊಂಡು ಹಾಗೆಯೇ ಅಧಿಕಾರ ಪಡೆದುಕೊಂಡವರು ಇಂದು ಅದೇ ಮಾಧ್ಯಮಗಳ ವಿರುದ್ಧ ತಿರುಗಿ ಬೀಳಲು ಅನೇಕ ಕಾರಣಗಳಿವೆ. ಇಂದು ಸಾಮಾಜಿಕ ಮಾಧ್ಯಮಗಳು ಮೊದಲಿನಂತೆ ಕೇವಲ ಒಂದೇ ಪಕ್ಷದ ಪ್ರಭಾವಕ್ಕೆ ಸೀಮಿತವಾಗಿಲ್ಲ. ಸರಕಾರ ಮತ್ತು ಪ್ರಧಾನಿಗಳ ಕುರಿತು ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಭಾರತೀಯ ಮಾಧ್ಯಮಗಳೆಲ್ಲೂ ಸಿಗದ ಹೊಗಳಿಕೆ ರಹಿತ ಚಿತ್ರಣಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತೀಯರನ್ನು ತಲುಪುತ್ತಿರುವದು ಸರಕಾರಕ್ಕೆ ಸಹ್ಯ ವಾಗುತ್ತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಸಾಮಾಜಿಕ ಮಾಧ್ಯಮಗಳು ತಮ್ಮ ಮಾಧ್ಯಮದ ಮೂಲಕ ಪ್ರಕಟವಾಗುತ್ತಿದ್ದ ಸುಳ್ಳುಗಳನ್ನು ನಿಯಂತ್ರಿಸಲು ಕೈಗೊಂಡ ಸ್ವಯಂ ಪ್ರೇರಿತ ಕ್ರಮಗಳು ಪ್ರಚಾರವನ್ನೇ ನೆಚ್ಚಿಕೊಂಡಿರುವ ಸರಕಾರದ ವಿಶ್ವಾಸಾರ್ಹತೆಗೆ ಕುಂದು ತರಬಹುದೆಂಬ ಭಯ ಸರಕಾರವನ್ನು ಕಾಡುತ್ತಿದೆ. ಸರಕಾರ ಕೇವಲ ಟ್ವಿಟರನ್ನು ನಿಯಂತ್ರಿಸಿ ಸುಮ್ಮನಾಗಲು ಸಾಧ್ಯವಿಲ್ಲ. ಸುಳ್ಳನ್ನು ಸತ್ಯದಿಂದ ಪ್ರತ್ಯೇಕಿಸಲು ಯತ್ನಿಸುತ್ತಿರುವ ಫ್ಯಾಕ್ಟ್ ಚೆಕಿಂಗ್ ಜಾಲತಾಣಗಳು ಅದರ ಮುಂದಿನ ಗುರಿಯಾಗಬಹುದು. ಹೀಗೆಯೇ ಮುಂದುವರೆದರೆ ಸರಕಾರವೇ ಫ್ಯಾಕ್ಟ್ ಚೆಕರ್ ಆಗಿ ಕಾರ್ಯ ನಿರ್ವಹಿಸತೊಡಗುವ ದಿನಗಳು ದೂರವಿರಲಾರದು.

-ಸುನೀಲ ನಾಯಕ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT